ಜಾಗ ನಮ್ಮದಾದರು ನಮಗೆ ಮನೆ ಕಟ್ಟಲು ಬಿಡುತ್ತಿಲ್ಲ

ಜಾಗ ನಮ್ಮದಾದರು ನಮಗೆ ಮನೆ ಕಟ್ಟಲು ಬಿಡುತ್ತಿಲ್ಲ

ಪಾವಗಡ, ಡಿ. 02: ನೀವೇಶನದ ಬಗ್ಗೆ  ನ್ಯಾಯಾಲಯದ ಆದೇಶ ಹಾಗೂ ಗ್ರಾ.ಪಂ.ನಲ್ಲಿ ಖಾತೆಯಾಗಿದ್ದರೂ ಸಹ ಗ್ರಾಮದ ಬಲಾಡ್ಯರು ನಮಗೆ ನಿವೇಶನದಲ್ಲಿ ಮನೆ ಕಟ್ಟಲು ಅಡ್ಡಿಪಡಿಸುತ್ತಿದ್ದಾರೆ ಎಂದು ತಾಲ್ಲೂಕಿನ ಓಬಳಾಪುರ ಗ್ರಾಮದ ಬಡ ವಿಧವಾ ಮಹಿಳೆ ಕಾಂತಮ್ಮ ಮತ್ತು ಪುತ್ರ ಗೀರೀಶ್ ಮಾದ್ಯಮದ ಮೂಲಕ ಅಲವತ್ತುಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಕಾಂತಮ್ಮ ಗ್ರಾಮದ ಅಸೆಸ್ ಮೆಂಟ್  ನಂ 406/419 ರಲ್ಲಿ 21=15 ಸುತ್ತಳತೆಯ ನಿವೇಶನದಲ್ಲಿ ಕಳೆದ 25 ವರ್ಷಗಳಿಂದ ವಾಸಮಾಡುತ್ತಿದ್ದೇವೆ, ನನ್ನ ಪತಿ ನಿಧನರಾದನಂತರ ನನ್ನ ಹೆಸರಿಗೆ ರಂಗಸಮುದ್ರ ಗ್ರಾಮಪಂಚಾಯಿತಿಯಲ್ಲಿ ಖಾತೆಯಾಗಿದೆ. ಆದರೆ, ನನ್ನ ಗಂಡ  ರಾಮಚಂದ್ರಪ್ಪ ಬದುಕಿದ್ದಾಗಲೆ ನಮ್ಮ ನಿವೇಶನದ ಪಕ್ಕದ ಜಿಮೀನಿನ ಮಾಲೀಕರಾದ  ತಿಮ್ಮಣ್ಣ, ಈರಣ್ಣ, ತಿಮ್ಮಯ್ಯ, ನವರುಗಳು ನಮ್ಮ ಸೈಟ್ ನ್ನು ಖಾಲಿಮಾಡಿಸಲು ನಮಗೆ ಬೆದರಿಕೆ ಹಾಕುತ್ತಿದ್ದರು ಇದರಿಂದ ನನ್ನ ಪತಿ ಪಾವಗಡದ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದಲ್ಲಿ ನಮ್ಮಪರವಾಗಿ ತಿರ್ಪು ಬಂದರೂ ಸಹ ಮನೆಕಟ್ಟಲು ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ಕಾಂತಮ್ಮನ ಮಗ ಗೀರೀಶ್ ಮಾತನಾಡಿ, ನಾವು ಗ್ರಾಮದಲ್ಲಿ ಗುಡಿಸಲುನಲ್ಲಿ ವಾಸಿಸುತ್ತಿದ್ದು, ಈ ನಿವೇಶನದಲ್ಲಿ ಮನೆಕಟ್ಟಲು ಹೋದರೆ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ರಂಗಸಮುದ್ರ ಗ್ರಾ.ಪಂ. ಪಿ.ಡಿ.ಓ. ರಂಗದಾಮ ಎನ್ನುವರು ಸ್ಥಳ  ತನಿಖೆ ಮಾಡಿ, ನಿವೇಶನ ನಮ್ಮ ತಾಯಿಗೆ ಸೇರಿದೆ ಎಂದು ಹೇಳಿದರೂ ಸಹ ತಿಮ್ಮಯ್ಯ ಇತರರು ಪಿ.ಡಿ.ಓ. ವಿರುದ್ದ ಗಲಾಟೆ ಮಾಡಿದ್ದಾರೆ.

ಈ ಬಗ್ಗೆ ವೈ.ಎನ್.ಹೊಸಕೋಟೆ ಪೋಲೀಸ್ ಠಾಣೆಗೆದೂರು ಸಲ್ಲಿಸಿದರೂ ಅವರ ಮೇಲೆ ಯಾವುದೆ ಕ್ರಮ ಕೈಗೊಂಡಿಲ್ಲ,  ನಾವು ಮಧುಗಿರಿಯ, ಡಿ.ವೈ.ಎಸ್.ಪಿ. ಹಾಗೂ ತುಮಕೂರಿನ ಎಸ್.ಪಿ. ಕಛೇರಿಗೂ ದೂರು ಸಲ್ಲಿಸಿದ್ದು,  ಇಗಲಾದರೂ ಪೋಲಿಸ್ ಇಲಾಖೆ ನಮಗೆ ರಕ್ಷಣೆ ನೀಡಿ ನಾವು ನಮ್ಮ ನೀವೇಶನದಲ್ಲಿ ಮನೆಕಟ್ಟಲು ಅವಕಾಶ ಮಾಡಿಕೊಡಬೆಕೆಂದು ಅಲವತ್ತುಕೋಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos