ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ಗೆ ಮತ್ತೊಂಬ ಹೊಸ ನಾಯಕಿ ಬರುತ್ತಿದ್ದಾರೆ. ಅವರು ನಮ್ಮ ದುನಿಯಾ ವಿಜಯ್ ಅವರ ಪುತ್ರಿ. ಕನ್ನಡ ಚಿತ್ರರಂಗದ ಅದ್ಭುತ ನಟ ವಿನಯ್ ಕುಮಾರ್ ಉರ್ಫ್ ದುನಿಯಾ ವಿಜಯ್ ಹಿರಿ ಮಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆತರಲು ಸಜ್ಜಾಗಿದ್ದಾರೆ. ಕಳೆದ ವಾರ ಫೋಟೋಶೂಟ್ ಮೂಲಕ ಸಿಹಿ ಸುದ್ದಿ ರಿವೀಲ್ ಮಾಡಿದ್ದರು. ‘ತಂದೆಯಾಗಿ ನನ್ನ ಮಕ್ಕಳ ಬಗ್ಗೆ ನನಗೆ ತುಂಬಾ ಕನಸುಗಳು ಇದೆ ಅದರಲ್ಲಿ ಒಂದು ಕನಸು ನನಸಾಗುತ್ತಿದೆ. ಶೀಘ್ರದಲ್ಲಿ ಮೊನಿಕಾ ಮುಂದಿನ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾಳೆ’ ಎಂದು ದುನಿಯಾ ವಿಜಯ್ ಖುಷಿ ವಿಚಾರ ಹಂಚಿಕೊಂಡಿದ್ದಾರೆ.
‘ಮೊನಿಕಾ ನಟಿಸುತ್ತಿರುವುದು ಒಂದು ಫ್ಯಾಮಿಲಿ ಡ್ರಾಮಾ ಸಿನಿಮಾದಲ್ಲಿ. ಮೊನಿಕಾ ಆನ್ ಸ್ಕ್ರೀನ್ ತಂದೆಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿರುವೆ’ ಎಂದು ವಿಜಯ್ ಹೇಳಿದ್ದಾರೆ. ಸೆಟ್ ವಿಚಾರದ ಬಗ್ಗೆ ಹೇಳಬೇಕು ಅಂದ್ರೆ ನಾನು ತುಂಬಾ ಶಿಸ್ತು ಫಾಲೋ ಮಾಡುವ ವ್ಯಕ್ತಿ ಅದನ್ನೇ ಮಕ್ಕಳಿಗೂ ಹೇಳಿಕೊಟ್ಟಿರುವೆ.
‘ಮಕ್ಕಳ ಮತ್ತು ನನ್ನ ನಡುವೆ ಇರುವ ಬಾಂಡ್ ನನಗೆ ತುಂಬಾ ಸ್ಪೆಷಲ್. ಒಂದು ಕಡೆ ಅವರಿಗೆ ಕ್ಲೋಸ್ ಸ್ನೇಹಿತನಾಗಿರುವ ಮತ್ತೊಂದು ಕಡೆ ಜವಾಬ್ದಾರಿ ಇರುವ ತಂದೆ ಆಗಿರುವೆ. ಮೂವರು ಮಕ್ಕಳು ತಮ್ಮ ಕನಸುಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ ಆದರೆ ಡೆಸ್ಟಿನಿ ನನ್ನ ಕೈಯಲ್ಲಿಲ್ಲ. ಶ್ರಮ ಅವರದ್ದು. ಮಕ್ಕಳ ಆಸೆ ಪಟ್ಟಿರುವ ಜೀವನವನ್ನು ಬದುಕುತ್ತಿದ್ದಾರೆ ಅದನ್ನು ನೋಡುವುದು ನನ್ನ ಭಾಗ್ಯ’ ಎಂದು ವಿಜಯ್ ಹೇಳಿದ್ದಾರೆ.