ಬೆಂಗಳೂರು, ಸೆ. 22 : ಪೈಲ್ವಾನ್ ಸಿನಿಮಾ ಸಂಪಾದನೆಯ ಬಗ್ಗೆ ಮಾತನಾಡುತ್ತಾ ನನಗೆ ದುಡ್ಡು ಮುಖ್ಯವಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಪೈಲ್ವಾನ್ ಸಿನಿಮಾ ನೂರು ಕೋಟಿ ಹಣ ಮಾಡಿದೆ ಅಭಿಮಾನಿಗಳು ಅದರ ಸಂಭ್ರಮಾಚರಣೆ ಮಾಡಲು ಕಾಯುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದುಡ್ಡು ನನಗೆ ಮುಖ್ಯವಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ. ನಾಲ್ಕು ಜನಕ್ಕೆ ತೋರಿಸೋಕೆ ಕೇಕ್ ಕಟ್ ಮಾಡಬೇಕು ಅಷ್ಟೇ. ಸಿನಿಮಾ ಚೆನ್ನಾಗಿ ಇದ್ದರೆ ಸಾಕು ಎಂದು ಹೇಳಿದರು