ಕೆ.ಆರ್.ಪೇಟೆ: ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಬಾರಿ ಸರಣಿ ಅಪಘಾತ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಶಿಕ್ಷಕನನ್ನು ಸರ್ವಜನಿಕರು ಹಿಡಿದು ರ‍್ಮದೇಟು ನೀಡಿ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ತನ್ನ ಪತ್ನಿಯ ತವರೂರಾದ ಚನ್ನರಾಯಪಟ್ಟಣ ತಾಲ್ಲೂಕಿನ ಚೋಳೇನಹಳ್ಳಿ ಗ್ರಾಮಕ್ಕೆ ತಂದೆಯೊಂದಿಗೆ ಕೆ.ಆರ್.ಪೇಟೆ ಮೂಲಕ ತೆರಳುವ ವೇಳೆ ತಾಲ್ಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ಒಬ್ಬ ವ್ಯಕ್ತಿಗೆ ಹಾಗೂ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಕೆಬಿಸಿ ಪೆಟ್ರೋಲ್ ಬಂಕ್ ಎದುರು ಮತ್ತೊಬ್ಬರಿಗೆ ಸರಣಿ ಅಪಘಾತ ಮಾಡಿ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಸರ‍್ವಜನಿಕರು ಹಿಡಿದು ರ‍್ಮದೇಟು ನೀಡಿ ಅಪಘಾತ ಮಾಡಿದ ಕಾರು ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಂಭೀರವಾಗಿ ಗಾಯ ಗೊಂಡಿರುವ ಇಬ್ಬರಿಗೂ ಕೆ.ಆರ್.ಪೇಟೆ ಪಟ್ಟಣದ ರ‍್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತೀವ್ರವಾಗಿ ರಕ್ತಶ್ರಾವವಾಗಿದ್ದ ಹೊನ್ನೇನಹಳ್ಳಿಯ ಶಶಿಕುಮಾರ್(೩೨) ಮತ್ತು ಅನುವಿನಕಟ್ಟೆಯ ಪ್ರಭಾಕರ(೩೮) ಎಂಬ ಇಬ್ಬರು ಯುವಕರು ಕೊನೆಯುಸಿರೆಳೆದಿದ್ದಾರೆ ಎಂದು ಕೆ.ಆರ್.ಪೇಟೆ ಪಟ್ಟಣ ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಾನಮತ್ತನಾಗಿ ಮಾರುತಿ ಸುಜಕಿ ರ‍್ಟಿಗ ಕಾರನ್ನು ಚಾಲನೆ ಮಾಡಿದ ಶಿಕ್ಷಕ ಚಾಮರಾಜನಗರ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಕಿರಣಕುಮಾರ್(೪೫) ಎಂದು ತಿಳಿದು ಬಂದಿದ್ದು ಸದರಿ ಚಾಲಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.