ಡಾ.ವಿಷ್ಣು ಕಪ್ ಕ್ರಿಕೆಟ್ ಪಂದ್ಯಾವಳಿ

  • In State
  • January 3, 2021
  • 258 Views
ಡಾ.ವಿಷ್ಣು ಕಪ್ ಕ್ರಿಕೆಟ್ ಪಂದ್ಯಾವಳಿ

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ಫ್ರೇಂಡ್ಸ್ ಇಲವೆನ್ ಗ್ರೂಪ್ ನವರು ಆಯೋಜಿಸಿರುವ ವಿಷ್ಣು ಕಪ್ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಬ್ಯಾಟಿಂಗ್ ಮಾಡುವುದರ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಇಂದುಶೇಖರ್ ಅವರು, ಮಾನವೀಯ ಮೌಲ್ಯಗಳ ಹರಿಕಾರ ವಿಷ್ಣುವರ್ಧನ್ ಕೂಡ ಕ್ರಿಕೇಟ್ ಪ್ರೇಮಿಯಾಗಿದ್ದರು. ವಿಷ್ಣು ಹೆಸರಿನಲ್ಲಿ ಪಂದ್ಯಾವಳಿಯನ್ನು ನಡೆಸುತ್ತಿರುವುದು ಶ್ಲಾಘನೀಯ. ವಿಷ್ಣುವರ್ಧನ್ ಕನ್ನಡದ ಹೆಮ್ಮೆಯ ನಟ, ಕನ್ನಡವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಪಂಚಭಾಷಾ ತಾರೆ ಅನಿಸಿಕೊಂಡಿದ್ದರು. ವಿಷ್ಣು ಅಭಿನಯಿಸಿರುವ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದೆ. ತಮ್ಮ ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿ ಜನಮಾನಸ ದಲ್ಲಿ ಉಳಿದಿದ್ದಾರೆ. ಇಂದಿನ ಯುವ ಜನಾಂಗ ಇವರ ಅಭಿನಯಿಸಿರುವ ಚಿತ್ರಗಳನ್ನು ನೋಡುವುದರ ಮೂಲಕ ಇವರ ಆದರ್ಶಗಳನ್ನು ಪಾಲಿಸಬೇಕು, ಎಂದು ಹೇಳಿದರು.
ಜಿ.ಪಂ ಮಾಜಿ ಅಧ್ಯಕ್ಷೆ ಜಿ.ನಾಗಶ್ರೀಪ್ರತಾಪ್ ಮಾತನಾಡಿ, ಕ್ರೀಡೆ ದೈಹಿಕವಾಗಿ ಸದೃಢರಾಗಿ, ಮಾನಸಿಕ  ಸ್ಥೈರ್ಯವನ್ನು ತುಂಬುವಲ್ಲಿ ಸಹಕಾರಿಯಾಗಲಿದೆ. ಪ್ರತಿಯೊಬ್ಬರು ಕ್ರೀಡೆ ಆಡುವುದರೊಂದಿಗೆ ಆಡುವವರಿಗೂ ಪ್ರೋತ್ಸಾಹಿಸಬೇಕು. ಕ್ರೀಡೆಗಳನ್ನು ಆಡುವುದರಿಂದ ಸಮಾಜದಲ್ಲಿ ಯವುದೇ ಜಾತಿ ಮತ ಭೇದವಿಲ್ಲದೆ ಸಹಬಾಳ್ವೆ ಏಕತೆ, ಕಾಣಬಹುದು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos