ಕೋಲಾರ, ಸೆ. 4 : ಮಳೆ ಬರುವ ಹಿನ್ನಲೆ ಶ್ವಾನ ತನ್ನ ಮರಿಗಳನ್ನ ರಕ್ಷಣೆ ಮಾಡುವ ಮನಕಲಕುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಕಿಂಡಿಯಂತಿರುವ ಸಣ್ಣ ಕಾಲುವೆಯಲ್ಲಿ ಮರಿಗಳನ್ನು ರಕ್ಷಣೆ ಮಾಡಿದ ವಿಡಿಯೋ ನೋಡಿದರೆ ಕಣ್ಣಂಚಲ್ಲಿ ನೀರು ಬರುವ ದೃಶ್ಯ ಕೋಲಾರದಲ್ಲಿ ನಡೆದಿದೆ. ಇಂದು ಸಂಜೆ ಬಂದ ಮಳೆಗೆ ಚರಂಡಿಯಲ್ಲಿ ನೀರು ತುಂಬಿಕೊಂಡಿದೆ. ನಾಯಿ ಮರಿಗಳ ರಕ್ಷಣೆಗಾಗಿ ತಾಯಿ ನಾಯಿ ಅರಣ್ಯ ರೋಧನೆ ನಡೆಸಿತು. ನಾಯಿ ಮರಿಗಳನ್ನು ರಕ್ಷಿಸುವ ಕರುಣಾಜನಕ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಕೋಲಾರದ ಗೌರಿಪೇಟೆಯ 5ನೇ ಕ್ರಾಸ್ ನಲ್ಲಿ ಇಂದು ನಾಯಿಯ ಪರದಾಟ, ಗೋಳಾಟ ಹೇಳ ತೀರದಂತಾಗಿತ್ತು. ತನ್ನ 5 ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಮತ್ತೊಂದು ಚರಂಡಿಗೆ ಸಾಗಿಸಿದ ನಾಯಿಯ ತಾಯಿ ಪ್ರೀತಿಯನ್ನು ಕಂಡ ಸ್ಥಳಿಯರ ಕಣ್ಣಾಲೆಗಳು ನೀರು ತುಂಬಿಕೊಂಡಿತ್ತು.