ಕ್ಯಾಲಿಫೋರ್ನಿ, ಆ. 21 : ಮೀನುಗಾರನೊಬ್ಬನನ್ನು ಆತ ಸಾಕಿದ್ದ ಡಾರ್ಬಿ ಎಂಬ ಪಿಟ್ಬುಲ್ ನಾಯಿಯೊಂದು ಶಾರ್ಕ್ ಬಾಯಿಯಿಂದ ಕಾಪಾಡಿದ ಘಟನೆ ಕ್ಯಾಲಿಫೋರ್ನಿಯಾದ ಬೊಡೆಗಾ ಬೇನಲ್ಲಿ ನಡೆದಿದೆ.
ಮೀನುಗಾರ ಜೇಮ್ಸ್ ವೈಟ್ನ ಕಾಲಿಗೆ ಕಚ್ಚುತ್ತಲೇ ಆತ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಆತನ ಸಹಚರರು ಬಹಳ ದೂರದಲ್ಲಿದ್ದರು. ಈ ಸಂದರ್ಭದಲ್ಲಿ ಓಡೋಡಿ ಬಂದ ಆತನ 45 ಕೆಜಿ ತೂಕವಿದ್ದ ಪಿಟ್ಬುಲ್ ಜೋರಾಗಿ ಬೊಗಳಿದ್ದಲ್ಲದೇ ಅದರ ಕಿವಿರುಗಳ ಮೇಲೆ ದಾಳಿ ಮಾಡಿದೆ. ಇದಾದ ಕೆಲ ಕ್ಷಣಗಳಲ್ಲೇ ವೈಟ್ ಕಾಲನ್ನು ಬಿಟ್ಟ ಶಾರ್ಕ್ ನೀರಿಗೆ ಜಿಗಿದಿದೆ. ಶ್ವಾನದ ನಿಯತ್ತನ್ನು ನೆನೆದ ವೈಟ್ ಭಾವುಕನಾಗಿ, “ಡಾರ್ಬಿ ಮೊದಲಿಂದಲೂ ನಮ್ಮ ಕುಟುಂಬದ ಭಾಗವಾಗಿದ್ದ, ಈಗ ಆತ ಅದಕ್ಕಿಂತಲೂ ಒಂದು ತೂಕ ಹೆಚ್ಚು” ಎಂದಿದ್ದಾನೆ.