ಸಚಿವ ಶಿವಳ್ಳಿ ನಿಧನಕ್ಕೆ ಡಿಕೆಶಿ ತೀವ್ರ ಸಂತಾಪ

ಸಚಿವ ಶಿವಳ್ಳಿ ನಿಧನಕ್ಕೆ ಡಿಕೆಶಿ ತೀವ್ರ ಸಂತಾಪ

ಬೆಂಗಳೂರು. ಮಾ.22, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನಕ್ಕೆ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನನಗೆ ಅವರು ಬರೀ ಸಹದ್ಯೋಗಿ ಮಾತ್ರವಷ್ಟೇ ಆಗಿರಲಿಲ್ಲ. ಬಹಳ ಆತ್ಮೀಯರೂ ಆಗಿದ್ದರು. ಶಿವಳ್ಳಿ ಅವರು ಇನ್ನಿಲ್ಲ ಎಂಬುದನ್ನೇ ನಂಬಲು ಆಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಬಡವರು, ದೀನ, ದಲಿತರ ಧ್ವನಿಯಾಗಿದ್ದ ಶಿವಳ್ಳಿ ಅವರು ಸದಾ ಜನರ ಒಡನಾಟದಲ್ಲಿದ್ದು, ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದರು. ಆ ಕಾರಣಕ್ಕಾಗಿಯೇ ಜನಾನುರಾಗಿ ಆಗಿದ್ದರು. ತೀರಾ ಸರಳ, ಸಜ್ಜನ ವ್ಯಕ್ತಿ ಆಗಿದ್ದ ಶಿವಳ್ಳಿ ಅವರ ನಿಧನದಿಂದ ರಾಜಕೀಯ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos