ರಾಮನಗರ, ಜ. 04: ರಾಮನಗರಕ್ಕೆ ನವಬೆಂಗಳೂರು ಮರುನಾಮಕರಣ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಬಿಜೆಪಿ ಆಡಳಿತ ನಡೆಸುತ್ತಿದೆ. ಪೇಪರ್, ಪೆನ್ನು ಅವರ ಕೈಲಿದೆ. ಅವರಿಗೆ ಹೇಗೆ ಬೇಕೋ ತೀರ್ಮಾನ ಮಾಡಲಿ. ಆಲ್ ದಿ ಬೆಸ್ಟ್. ಆದರೆ, ಈ ವಿಚಾರದಲ್ಲಿ ನಮ್ಮನ್ನು ಇದುವರೆಗೂ ಯಾರೂ ಸಂಪರ್ಕಿಸಿಲ್ಲ. ನಾನು ಈ ಹಿಂದೆ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಪರಿಗಣಿಸಲು ಸಲಹೆ ನೀಡಿದ್ದೆ. ರಾಮನಗರದಲ್ಲಿ ನಾಲ್ಕು ಶಾಸಕರಿದ್ದೇವೆ. ನೋಡೋಣ ಸರ್ಕಾರ ಯಾವ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.