ಥೇಣಿ (ತಮಿಳುನಾಡು), ಏ. 17, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣಾ ಆಯೋಗ ನೇಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ತಮಿಳುನಾಡಿನ ಥೇಣಿ ಲೋಕಸಭಾ ಕ್ಷೇತ್ರದಲ್ಲಿ ಎಎಂಎಂಕೆ ಮುಖಂಡ ಟಿ.ಟಿ.ವಿ. ದಿನಕರ್ ಬೆಂಬಲಿಗರಿಗೆ ಸೇರಿದ ವ್ಯಾಪಾರ ಮಳಿಗೆಯೊಂದರ ಮೇಲೆ ದಾಳಿ ನಡೆಸಿ ಭಾರಿ ಪ್ರಮಾಣದ ನಗದು ವಶಪಡಿಸಿಕೊಂಡಿದೆ.
ದಾಳಿಗೆ ಅಡ್ಡಿ ಪಡಿಸಿದ ಎಎಂಎಂಕೆ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.
ಮತದಾರರಿಗೆ ವಿತರಿಸುವ ಸಲುವಾಗಿ ಭಾರಿ ಪ್ರಮಾಣ ನಗದು ಸಂಗ್ರಹಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.