ತುಮಕೂರು, ಅ. 15: ನಗರದ ಸ್ಮಾರ್ಟ್ಸಿಟಿ ಲಿಮಿಟೆಡ್ ಸಂಸ್ಥೆ ರೋಗಿಗಳ ತ್ವರಿತ ಸೇವೆಗೆ ಡಿಜಿಟಲ್ ನರ್ವ್ ಸೆಂಟರ್ ಆರಂಭಿಸಲು ಉದ್ದೇಶಿಸಿದ್ದು, ಶೀಘ್ರದಲ್ಲೇ ಉದ್ಘಾಟನೆ ಆಗಲಿದೆ. ತಂತ್ರಜ್ಞಾನ ಹಾಗೂ ಪ್ರಕ್ರಿಯೆಗಳ ಸಂಯೋಜನೆ ಆಧಾರದಡಿ ಪರಸ್ಪರ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿರುವ ಈ ಡಿಜಿಟಲ್ ನರ್ವ್ ಸೆಂಟರ್ ಯೋಜನೆಗೆ ಬರೋಬ್ಬರಿ 2.27 ಕೋಟಿ ರೂಪಾಯಿ ವ್ಯಯಿಸಲಾಗಿದೆ.
ಮೊದಲ ಹಂತದಲ್ಲಿ ತುಮಕೂರು ನಗರದ ಆಯ್ದ 7 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆ ಮೂಲಕ ಒಂದೇ ಸಂಕೀರ್ಣದಡಿ ನರ್ವ್ ಸೆಂಟರ್ ಕಾರ್ಯನಿರ್ವಹಿಸಲಿದೆ. ವಿಶೇಷವೆಂದರೆ ನರ್ವ್ ಸೆಂಟರ್ ಮೂಲಕ ದಾಖಲಾದ ರೋಗಿಗಳ ವೈದ್ಯಕೀಯ ದತ್ತಾಂಶ ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ.
ತಾಂತ್ರಿಕ ಮಾನವ ಶಕ್ತಿ, ಮೂಲಸೌಕರ್ಯಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ತಾನೇ ಭರಿಸಲಿದೆ. ಉಳಿದಂತೆ ಅಗತ್ಯ ಆರೋಗ್ಯ ಸೇವೆಯನ್ನು ಜಿಲ್ಲಾಸ್ಪತ್ರೆ ನೀಡಲಿದೆ.