ಪುರುಲಿಯಾ,ಮೇ. 9,ನ್ಯೂಸ್ ಎಕ್ಸ್ ಪ್ರೆಸ್: ದೀದಿ ನನಗೆ ಕಪಾಳಮೋಕ್ಷವಾಗಬೇಕೆಂದು ಹೇಳಿದ್ದಾರೆ. ”ನನಗೆ ಹೊಡೆಯುವ ಹೊಡೆತವೂ ನನಗೆ ಆಶೀರ್ವಾದ ಇದ್ದಂತೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಟಾಂಗ್ ನೀಡಿದ್ದಾರೆ.
ಪ.ಬಂಗಾಳದ ಪುರುಲಿಯಾದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ,’ನನಗೆ ನಿಮ್ಮ ಮೇಲೆ ಅಪಾರ ಗೌರವವಿದೆ, ನೀವು ನನಗೆ ಹೊಡೆಯುವ ಹೊಡೆತವೂ ನನಗೆ ಆಶೀರ್ವಾದ ಇದ್ದಂತೆ’. ಸ್ವೀಕರಿಸುತ್ತೇನೆ ಎಂದು ಹೇಳಿದರು. ‘ಆದರೆ ಮಮತಾ ನನಗೆ ಹೊಡೆಯುವುದಕ್ಕೂ ಮೊದಲು ನಿಮ್ಮ ಸರ್ಕಾರದಲ್ಲಿರುವ ಭ್ರಷ್ಟರಿಗೆ, ಸುಲಿಗೆಕೋರರಿಗೆ ಕಪಾಳಮೋಕ್ಷ ಮಾಡಿ ಸರಿ ದಾರಿಗೆ ತನ್ನಿ..’ಎಂದು ಮೋದು ಮಮತಾ ಹೇಳಿಕೆಗೆ ಪ್ರತ್ಯುತರ ನೀಡಿದ್ದಾರೆ. ಶೀಘ್ರದಲ್ಲೇ ಪ್ರಜಾಪ್ರಭುತ್ವ ಕಪಾಳಮೋಕ್ಷ ಮಾಡಲಿದೆ ಎಂಬ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರಧಾನಿ ಮೋದಿ ಟಾಂಗ್ ನೀಡಿದ್ದಾರೆ.