ಬೆಂಗಳೂರು, ಸೆ. 6 : ಬಾದಾಮಿ ಸೇವಿಸಿದಲ್ಲಿ ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅ0ಶ, ಇನ್ಸುಲಿನ್ನ ಅ0ಶ, ಹಾಗೂ ಸೋಡಿಯ0ನ ಮಟ್ಟಗಳನ್ನು ತಗ್ಗಿಸುತ್ತವೆ ಹಾಗೂ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸ0ಭಾವ್ಯವನ್ನು ನಿಯ0ತ್ರಿಸಬಲ್ಲ ಮೆಗ್ನೀಷಿಯ0ನ ಮಟ್ಟವನ್ನು ಶರೀರದಲ್ಲಿ ಹೆಚ್ಚಿಸುತ್ತವೆ.
ಡಯಾಬಿಟಿಸ್ರೋಗಕ್ಕೆ ಸಂಬಂಧಿಸಿದ ಅಪಾಯಕರ ಅಂಶಗಳನ್ನು ಕಡಿಮೆ ಮಾಡುವಲ್ಲಿ ಬಾದಾಮಿ ಸಹಕಾರಿ ಎಂದಿದೆ ಅಧ್ಯಯನ. ನಿತ್ಯ ಬಾದಾಮಿ ತಿನ್ನುವುದು ಗ್ಲೈಸೆಮಿಕ್ಮತ್ತು ಕಾರ್ಡಿಯೊವಾಸ್ಕ್ಯುಲರ್ಪ್ರಮಾಣಗಳನ್ನು ಸುಧಾರಿಸುತ್ತದೆ ಹಾಗೂ ಉತ್ತಮ ಆರೋಗ್ಯವನ್ನು ನೀಡುತ್ತದೆ.
ಸಂಶೋಧಕರ ಪ್ರಕಾರ, ಅಧಿಕ ಪ್ರಮಾಣ ಹಾಗೂ ಕಡಿಮೆ ವಯಸ್ಸಿನಲ್ಲಿ ಕಂಡು ಬರುವ ಟೈಪ್2 ಡಯಾಬಿಟಿಸ್ಸೌಥ್ಏಶಿಯನ್ಫೆನೊಟೈಪ್ಎಂದು ಕರೆಯಲಾಗುವ ಆನುವಂಶಿಕ ಕಾರಣದಿಂದ ಉಂಟಾಗುತ್ತದೆ. ಈ ಕಾರಣದಿಂದಾಗಿ ಭಾರತೀಯರು ಹೆಚ್ಚಿನ ಪ್ರಮಾಣದ ಇನ್ಸೂಲಿನ್ಪ್ರತಿರೋಧ ಹಾಗೂ ಟೈಪ್2 ಡಯಾಬಿಟಿಸ್ಗೆ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ.
ಸಂಶೋಧನಾ ಅಧ್ಯಯನದ ಪ್ರಕಾರ, ಬಾದಾಮಿ ಸೇವನೆಯು ಈ ಅಧ್ಯಯನದಲ್ಲಿ ಕಂಡುಬಂದ ಕಾರ್ಡಿಯೊಮೆಟಬಾಲಿಕ್ಪ್ರಯೋಜನಗಳನ್ನು ತೋರಿಸಿಕೊಟ್ಟಿದೆ. ಬಾದಾಮಿಯು ಪ್ರೊಟೀನ್, ನಾರಿನಂಶ, ದೇಹಕ್ಕೆ ಬೇಕಾದ ಉತ್ತಮ ಕೊಬ್ಬು, ವಿಟಮಿನ್ಇ, ಪೊಟ್ಯಾಶಿಯಂ ಹಾಗೂ ಮ್ಯಾಗ್ನೇಶಿಯಂಗಳನ್ನು ಆಹಾರದಲ್ಲಿ ಬೆರೆಸುತ್ತದೆ ಮತ್ತು ಗ್ಲೈಸೆಮಿಕ್ಪ್ರಮಾಣ ಕಡಿಮೆಯಾಗಿರುವಂತೆ ನೋಡಿಕೊಳ್ಳುತ್ತದೆ.