ಬೆಂಗಳೂರು, ಮಾ, 23, ನ್ಯೂಸ್ ಎಕ್ಸ್ ಪ್ರೆಸ್: ನಿಮಗೆ ಅಚ್ಚರಿ ಎನಿಸಬಹುದು ಕಟ್ಟಡ ಬೀಳುತ್ತದೆ ಎಂಬ ಮಾಹಿತಿ ಕಟ್ಟಡದ ಮಾಲೀಕರಿಗೆ ಒಂದು ವಾರದ ಮುಂಚೆಯೇ ತಿಳಿದಿದ್ದಂತೆ, ಕೆಳ ಮಹಡಿಯ ಪಿಲ್ಲರ್ ಬಿರುಕು ಬಿಟ್ಟಿತ್ತು, ಎಂದು ತಿಳಿದು ಬಂದಿದೆ. ಬಿರುಕು ಬಿಟ್ಟಿದ್ದ ಇಲ್ಲದ ಪಕ್ಕದಲ್ಲೇ ನೆಲ ಅಗೆದು ಮತ್ತೊಂದು ಪಿಲ್ಲರ್ ಕಟ್ಟುವ ಸಾಹಸಕ್ಕೆ ಮಾಲಿಕ ಹಾಗೂ ಇಂಜಿನಿಯರ್ ಮುಂದಾಗಿದ್ದರು, ಇದೇ ಕಾರಣಕ್ಕಾಗಿ ಕಟ್ಟಡ ಕುಸಿದು ಬಿದ್ದಿದೆ ಎಂಬ ಸಂಗತಿಯು ಕೆಲವು ಮೂಲಗಳಿಂದ ಹೊರ ಬೀಳುತ್ತಿದೆ. ಸರ್ಕಾರದ ವತಿಯಿಂದ ಈ ಕಟ್ಟಡಕ್ಕೆ ನಾಲ್ಕು ಅಂತಸ್ತಿನ ಪರವಾನಗಿ ಇತ್ತು ಆದರೆ ಅಕ್ರಮವಾಗಿ ಕಟ್ಟಡದ ಮಾಲೀಕ ಐದು ಅಂತಸ್ತಿನ ಕಟ್ಟಡವನ್ನು ಕಟ್ಟಿದ್ದ ಎನ್ನಲಾಗಿದೆ, ಎಲ್ಲಾ ಸಾವಿಗೂ ಕಟ್ಟಡದ ಮಾಲೀಕ ಹಾಗೂ ಇಂಜಿನಿಯರ್ ಇಬ್ಬರ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಅಂದಹಾಗೆ, ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದ ಕಾರಣ 15 ಜನರ ಸಾವು ಸಂಭವಿಸಿದೆ. ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಜನರು ಸಿಲುಕಿರುವ ಸಾಧ್ಯತೆಗಳಿದ್ದು ಹಾಗೂ ಜೀವಂತವಾಗಿರುವ ಮೂವರು ಸಿಲುಕಿದ್ದಾರೆ ಎಂಬ ಮಾಹಿತಿಗೆ ರಕ್ಷಣಾ ತಂಡಕ್ಕೆ ಸಿಕ್ಕಿದೆ. ಈಗಾಗಲೇ ಕಟ್ಟಡದ ಅಡಿಯಲ್ಲಿದ್ದ ಒಟ್ಟು 61 ಜನರನ್ನು ರಕ್ಷಣೆ ಮಾಡಲಾಗಿದೆ.