‘ದೇವೇಗೌಡರ ಕುಟುಂಬಕ್ಕೆ ಬುದ್ಧಿ ಬರಲಿ’

‘ದೇವೇಗೌಡರ ಕುಟುಂಬಕ್ಕೆ ಬುದ್ಧಿ ಬರಲಿ’

ತುಮಕೂರು, ಜೂನ್. 13: ತುಮಕೂರಿಗೆ ಹೇಮಾವತಿ ನೀರು ಸಂಪೂರ್ಣವಾಗಿ ಬಿಟ್ಟಿಲ್ಲ. ಸಮುದ್ರಕ್ಕೆ ನೀರು ಬಿಡ್ತಾರೆ ತುಮಕೂರಿಗೆ ಬಿಡಲ್ಲಾ. ತುಮಕೂರಿನವರು ಪಾಕಿಸ್ತಾದವರಾ, ಪಾಪಿಷ್ಟರಾ..? ದೇವೇಗೌಡರ ಕುಟುಂಬ ನೀರಾವರಿ ವಿಚಾರದಲ್ಲಿ ಅನ್ಯಾಯ ಮಾಡುತ್ತಾ ಬಂದಿದೆ.  ದೇವೇಗೌಡರು ವಯೋ ವೃದ್ದರು ಅವರಿಗೆ ಸದ್ಬುದ್ದಿ ಬರಲಿ. ಮಕ್ಕಳಿಗೂ ಬುದ್ದಿ ಹೇಳಲಿ ಎಂದು ದೇವೇಗೌಡರ ಕುಟುಂಬದ ವಿರುದ್ಧ ಸಂಸದ ಜಿ.ಎಸ್.ಬಸವರಾಜು ಮತ್ತೆ ಕಿಡಿಕಾರಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಹೇಮಾವತಿ ನಾಲೆಗೆ ಲಿಂಕಿಂಗ್ ಕೆನಾಲ್ ನಿರ್ಮಿಸಿ ಮಾಗಡಿಗೆ ಕೊಂಡೊಯ್ಯುವ ಯೋಜನೆ ವಿರೋಧಿಸಿದ  ಸಿಎಂಗೆ ಅಲಾರಾಂ ಕೊಡುತ್ತೇನೆ. ನಾವು ಕೊಡುವ ಅಲಾರಾಂ ಅವರಿಗೆ ಎಚ್ಚರಿಕೆ ಆಗಬೇಕು. ಇಂಜಿನಿಯರ್ ಹೇಳುವ ಮಾತನ್ನು ಕೇಳಿ. ಯಾವುದೋ ರಾಜಕಾರಣಿ ಹೇಳ್ತಾನೆ ಅಂತಾ ಹೇಳಿ, ನೀರು ಕೊಂಡೊಯ್ಯುವ ಉಡಾಫೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos