ಬೆಂಗಳೂರು, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ಜೆಡಿಎಸ್ ನಾಯಕರು ಹಾಗೂ ಅವರ ಸಂಬಂಧಿಕರ ಮೇಲೆ ನಡೆದ ಐಟಿ ದಾಳಿಯ ಹಿಂದಿನ ಅಸಲಿ ಕಾರಣ ಏನೆಂಬುದನ್ನು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ್ರು ಬಹಿರಂಗಪಡಿಸಿದ್ದಾರೆ. ಸರ್ಕಾರ ರಚನೆ ಮಾಡುವುದಕ್ಕೆ ಅಂದು ಅಮಿತ್ ಶಾ ಕೊಟ್ಟ ಆಫರ್ ಅನ್ನು ನಾವು ನಿರಾಕರಿಸಿದ್ದೇವು. ಅಷ್ಟೇ ಅಲ್ಲದೇ ಈ ಹಿಂದೆ ಜೆಡಿಎಸ್ ಜೊತೆಗೆ ಸರಕಾರ ವನ್ನು ರಚಿಸುವುದಕ್ಕೆ ಬಿಜೆಪಿ ಮುಂದಾಗಿತ್ತು, ಅದು ಸಾಧ್ಯವಾಗದ ಕಾರಣ ಬಿಜೆಪಿಯವರು ದಾಳಿ ನಡೆಸಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಲೋಕಸಭಾ ಚುನಾವಣಾ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಆದಾಯ ತೆರಿಗೆ ಇಲಾಖಾ ಅಧಿಕಾರಿಗಳು ಸಚಿವ ಎಸ್.ಪುಟ್ಟರಾಜು ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು. ಈ ನಡುವೆ ದಾಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡ್ರು ಐಟಿ ದಾಳಿಗೆ ಅಸಲಿ ಕಾರಣವೆನೆಂಬುದನ್ನು ತಿಳಿಸಿದ್ದಾರೆ.