ಡಿಮಾಂಡೊ ಡಿಮ್ಯಾಂಡ್!

ಡಿಮಾಂಡೊ ಡಿಮ್ಯಾಂಡ್!

ಲಕ್ಷ್ಮೇಶ್ವರ, ಡಿ.3: ರೈತರಿಂದ ಕಡಿಮೆ ಬೆಲೆಗೆ ಈರುಳ್ಳಿ ಖರೀದಿಸಿ ಸ್ವಚ್ಛಗೊಳಿಸಿ ಮಾರಾಟ ಮಾಡುವತ್ತ ಚಿತ್ತ ಹರಿಸಿದ್ದು, ಹೋಟೆಲ್, ಖಾನಾವಳಿ, ರೆಸ್ಟೋರೆಂಟ್ಗಳಲ್ಲಿ ಉಳ್ಳಾಗಡ್ಡಿ ಕೊಡುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ.

ಉಳ್ಳಾಗಡ್ಡಿ ಬೆಳೆದ ರೈತರು ಜಮೀನು ಹದಗೊಳಿಸಿ ಕಡಲೆ, ಜೋಳ ಬಿತ್ತನೆ ಮಾಡಿದ್ದಾರೆ. ಇದರಿಂದ ಜಮೀನಿನಲ್ಲಿ ಕಾಣುತ್ತಿರುವ ಉಳ್ಳಾಗಡ್ಡಿ ಮತ್ತು ಉಳ್ಳಾಗಡ್ಡಿ ಹೆಚ್ಚುವ ಸಂದರ್ಭದಲ್ಲಿ ಬೇಡವೆಂದು ಚೆಲ್ಲಿದ್ದ ಗುಣಮಟ್ಟದ್ದಲ್ಲದ ಉಳ್ಳಾಗಡ್ಡಿಯನ್ನು ಆಯ್ದು ತೆಗೆದು ರಾತ್ರೋರಾತ್ರಿ ಸ್ವಚ್ಛಗೊಳಿಸಿ ಮಾರಾಟ ಮಾಡುತ್ತಿದ್ದಾರೆ.

ಲಕ್ಷ್ಮೇಶ್ವರ ದಲ್ಲಿ ಕೆಜಿ ಉಳ್ಳಾಗಡ್ಡಿಗೆ 40ರಿಂದ 60 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಇದು ದೊಡ್ಡ ಪಟ್ಟಣಗಳಿಗೆ ಹೋಲಿಸಿದರೆ ದರ ಕೊಂಚ ಕಡಿಮೆ ಎನ್ನಬಹುದು. ಎಲ್ಲೆಡೆ ಉಳ್ಳಾಗಡ್ಡಿಯದ್ದೇ ಮಾತಾಗಿದ್ದು, ಉಳ್ಳಾಗಡ್ಡಿಗೆ ಬಂದಿರುವ ಬೇಡಿಕೆಯಿಂದ ಎಲ್ಲರಿಗೂ ಬಿಸಿ ತಟ್ಟಿದೆ.

 

 

 

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos