ಬೆಂಗಳೂರು,ನ. 24 : ತಾಯಿಗೆ ದ್ರೋಹ ಬಗೆದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಸೋಲಿಸಿ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದ್ಧಾರೆ. “ಕೊಟ್ಟ ಕುದುರೆ ಏರಲಾಗದವನು, ಇನ್ನೊಂದು ಕುದುರೆ ಏರುತ್ತೇನೆ ಎನ್ನೋನು ವೀರನು ಅಲ್ಲ ಶೂರನು ಎಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಹೇಶ್ ಕುಮಟಳ್ಳಿಗೆ ಹೇಳಿದ್ಧಾರೆ.
ಅಥಣಿ ಕ್ಷೇತ್ರದ ಕಕಮರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಚಾರ ನಡೆಸಿದರು. ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತಾಡಿದ ಹೆಬ್ಬಾಳ್ಕರ್, ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ವಿರುದ್ಧ ಕಟು ವಾಗ್ದಾಳಿ ನಡೆಸಿದರು. “ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದರೆ, ಮೂರು ಮತ್ತೊಂದು ಅನ್ನೋವಂತಹ ಮಳ್ಳ ಮಹೇಶ್ ಕುಮಟಳ್ಳಿ” ಎಂದು ಜರಿದಿದ್ದಾರೆ.