ಹಗಲು ಕುಡಿತ,ಅಪಘಾತಗಳ ಆಗರ

ಹಗಲು ಕುಡಿತ,ಅಪಘಾತಗಳ ಆಗರ

ಬೆಂಗಳೂರು, ಆ. 30: ಸಿಲಿಕಾನ್ ಸಿಟಿ, ಮೆಟ್ರೊ ಪಾಲಿಟನ್, ನವ ಬೆಂಗಳೂರು ನಗರ ಅತಿ ವೇಗವಾಗಿ ಬೆಳೆಯುತ್ತದೆ ಅಷ್ಟೇ ಅವಾಂತರ ಅವಘಡ, ಅಪಘಾತದಲ್ಲಿಯೂ ಮುಂದಿದೆ. ಅಪಘಾತಗಳ ತವರುಮನೆ ಆಗುತ್ತಿದೆ. ಮದ್ಯಾನ 3 ರಿಂದ 6 ಗಂಟೆ  ಸಮಯದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಇಷ್ಟೆಲ್ಲ ಅನಾಹುತಗಳಿಗೆ ಕಾರಣ ಹಗಲು ಕುಡಿತವೇ ಪ್ರಮುಖ ಕಾರಣ ಎನ್ನುವುದು ಸಂಚಾರಿ ಪೋಲಿಸರ ಅಭಿಪ್ರಾಯ.

ಕಳೆದ ಹದಿನೈದು ದಿನಗಳಿಂದೆ ಹೆಚ್.ಎಸ್.ಆರ್ ಲೇಔಟ್ ನಲ್ಲಿ ಫುಟ್ ಪಾತ್ ಗೆ ಕಾರು ನುಗ್ಗಿಸಿ ಏಳು ಮಂದಿ ಗಾಯಗೊಂಡ ಪ್ರಕರಣ ನಡೆದಿದ್ದು, ಕುಡಿದು ಕಾರು ಚಲಾಯಿಸುವ ಪ್ರಕರಣಗಳಿಗೆ ತಾಜಾ ಉದಾಹರಣೆಗಳಲ್ಲೊಂದು. ಇಂತಹ ಹಲವು ಅವಘಡಗಳು ನಡೆಯುತ್ತಿವೆ. ಹಗಲು ಕುಡುಕರಿಗೆ ಲಗಾಮು ಹಾಕಲಾಗುತ್ತಿಲ್ಲ ಎಂದು ಸಂಚಾರ ಪೋಲಿಸರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

2018ರ ಅಂಕಿ ಅಂಶಗಳ ಪ್ರಕಾರ 4611 ಅಪಘಾತಗಳಲ್ಲಿ ಶೇಕಡ 32 ರಷ್ಟು ಅಂದರೆ 1473 ಅಪಘಾತಗಳು ಕಾರು, ಬೈಕ್, ಟ್ಯಾಕ್ಸಿ, ಜೀಪುಗಳಿಂದ ಸಂಭವಿಸಿವೆ. ಲಾರಿ, ಬಸ್ಸುಗಳು, ಶಾಲಾ ವಾಹನಗಳಿಂದ ಸಂಭಂದಿಸಿದ ಅಪಘಾತಗಳು ಕಡಿಮೆ. ಅದರಲ್ಲೂ ಮದ್ಯಾನ 3 ರಿಂದ 6 ಗಂಟೆ ನಡುವಿನ ಅವಧಿಯಲ್ಲಿ ಸಂಭವಿಸಿರುವ ಅಪಘಾತಗಳು ಜಾಸ್ತಿ 1473ರಲ್ಲಿ ಶೇ 50 ರಷ್ಟು ಅಂದರೆ 768 ಅಪಘಾತಗಳು 3 ರಿಂದ 6 ಗಂಟೆಗಳ ಮದ್ಯದಲ್ಲಿ ನಡೆದಿರುವುದು ಸಂಚಾರಿ ಪೋಲಿಸರ ‌ಅಂಕಿ ಅಂಶಗಳಿಂದ ದೃಢಪಟ್ಟಿದೆ.

ವಾಹನಗಳಲ್ಲೇ ಮದ್ಯ ಸೇವನೆ

ಬಾರ್ ಮತ್ತು ವೈನ್ ಶಾಪ್ ಗಳ ಮುಂದೆಯೇ ಆಟೊ ಮತ್ತು ಕಾರುಗಳ ಚಾಲಕರು ಚಾಲಕನ ಸೀಟಲ್ಲಿ ಕೂತು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿ ನಡೆಯುತ್ತಿದೆ. ಹಗಲು ವೇಳೆಯಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸುವುದನ್ನ ಸಂಚಾರಿ ಪೋಲಿಸರು ತಡೆಯಲಾಗುತ್ತಿಲ್ಲ. ಸಂಚಾರಿ ಪೋಲಿಸರಿಗೆ ಹಗಲು ವೇಳೆ ಉಂಟಾಗುವ ಟ್ರಾಫಿಕ್ ಕಂಟ್ರೋಲ್ ಮಾಡಿ ಸಂಚಾರ ಸುಗಮ ಮಾಡುವುದರಲ್ಲೇ ಹೈರಾಣಾಗಿರುತ್ತಾರೆ. ಇನ್ನೂ ಈ ಕುಡುಕ ಚಾಲಕರನ್ನು ತಪಾಸಣೆ ಮಾಡಲು  ಸಾದ್ಯವಾಗುತ್ತಿಲ್ಲ.

ಆಂಬುಲೆನ್ಸ್, ಮತ್ತು ಶಾಲಾವಾಹನಗಳ ಚಾಲಕರನ್ನು ಮಾತ್ರ ಆಗಾಗ ಹಗಲು ವೇಳೆ ತಡೆದು ತಪಾಸಣೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಪಾನಮತ್ತರಾಗಿ ಚಾಲನೆ ಮಾಡಿ ಸಿಕ್ಕಿ ಬಿದ್ದ ಚಾಲಕರ ಚಾಲನಾ ಪರವಾನಗಿ ರದ್ದತಿಗೆ ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ. ಕುಡಿದು ಚಾಲನೆ ಮಾಡುವ ಚಾಲಕರನ್ನು ನೇಮಕ ಮಾಡಿಕೊಳ್ಳದಂತೆ ಶಾಲಾ ಆಡಳಿತ ಮಂಡಳಿ, ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಂಚಾರಿ ವಿಭಾಗದ ಪೋಲಿಸರು ಹೇಳುತ್ತಾರೆ. ಖಾಸಗಿ ವಾಹನಗಳ ಚಾಲಕರು ಮತ್ತು ಮಾಲೀಕರು ಹಗಲು ಹೊತ್ತಿನಲ್ಲೇ ವೈನ್ ಸ್ಟೋರ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಮುಂದೆ ವಾಹನ ನಿಲ್ಲಿಸಿಕೊಂಡು ವಾಹನಗಳಲ್ಲೇ ಕುಡಿದು ಚಾಲನೆ ಮಾಡುತ್ತಿರುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಾಗಿಲ್ಲ. ಅಬಕಾರಿ ಇಲಾಖೆಯ ಮೂಲಕ ವೈನ್ ಸ್ಟೋರ್ ಮಾಲೀಕರಿಗೆ ಆಗಾಗ ಎಚ್ಚರಿಕೆ ಕೊಡಿಸಲಾಗುತ್ತಿದೆ. ಆದರೂ, ವೈನ್ ಸ್ಟೋರ್ ಮಾಲೀಕರು ಯಾವ ವಾಹನದಲ್ಲಿ ಕುಳಿತು ಕುಡಿಯುತ್ತಾರೆಂಬುದು ನಮಗೆ ಗೊತ್ತಾಗುವುದಿಲ್ಲ ನಾವು ಅವರು ಕುಡಿಯುವುದನ್ನೇ ನೋಡಿಕೊಂಡು ಕಾವಲಿರಲು ಸಾದ್ಯವಿಲ್ಲ ಅಂತಹ ಪರಿಶೀಲನೆ ಮಾಡುವ ಕೆಲಸ ನಮ್ಮದಲ್ಲ ಎಂದು ನೇರವಾಗಿ ಹೇಳಿ ನುಣುಚಿಕೊಳ್ಳುತ್ತಿದ್ದಾರೆ.

ಹೊರಗೆ ಸಪ್ಲೈ ಮಾಡಲ್ಲ

ರಾಜಾಜಿನಗರದ ವೈನ್ ಸ್ಟೋರ್ ವ್ಯವಸ್ಥಾಪಕ ಮಂಜೇಶ್ ಹೇಳೊ ಪ್ರಕಾರ ಯಾವುದೇ ವೈನ್ ಸ್ಟೋರ್ ಅಂಗಡಿಯವರು ಒಳಗೆ ಕೂರಿಸಿ ಸಪ್ಲೈ ಮಾಡಲ್ಲ, ಹಾಗೂ ನಮ್ಮ ಶಾಪ್ ಗಳಲ್ಲಿ ಖರೀದಿ ಮಾಡಿ ಹೊರಗಡೆ ತಗೋಂಡೊಗಿ ಕುಡಿಬೇಕು ಅವರೆಲ್ಲಿ ಕುಡಿತಾರೆ ಅನ್ನೋದು ನಮಗೆ ಗೊತ್ತಾಗುವುದಿಲ್ಲ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos