ನವದೆಹಲಿ, ಮೇ. 25, ನ್ಯೂಸ್ ಎಕ್ಸ್ ಪ್ರೆಸ್: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮತ್ತೆ ಅಧಿಕಾರದ ಗದ್ದುಗೆ ಏರಿದ್ದು, ಪಾಕಿಸ್ತಾನ ಕುಖ್ಯಾತ ಭೂಗತ ಪಾತಕಿಗೆ ನಡುಕ ಶುರುವಾಗಿದೆ. ಎರಡನೇ ಬಾರಿ ಸ್ಪಷ್ಟ ಬಹುಮತದ ಮೂಲಕ ಪ್ರಧಾನಿ ಹುದ್ದೆಗೇರಿದ್ದ ಹಿನ್ನಲೆಯಲ್ಲಿ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಚಿಂತೆಗೀಡಾಗಿದ್ದಾನೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿರುವುದಾಗಿ ಆಂಗ್ಲ ಮಾಧ್ಯಮ ವೆಬ್ ಸೈಟ್ ವೊಂದು ತಿಳಿಸಿದೆ.
ಮೋದಿ ಐತಿಹಾಸಿಕ ಗೆಲುವು ಸಾಧಿಸಿರುವುದು ದಾವೂದ್ ಇಬ್ರಾಹಿಂ ಕಂಗೆಟ್ಟಿದ್ದು, ಪಾಕಿಸ್ತಾನದ ಐಎಸ್ ಐ ಕೆಲವು ಹಿರಿಯ ಅಧಿಕಾರಿಗಳಲ್ಲಿ ತನ್ನ ಭಯ ಹುಟ್ಟಿದೆ ಎಂದು ವರದಿ ತಿಳಿಸಿದೆ. ಅಷ್ಟೇ ಅಲ್ಲ ಐಎಸ್ ಐ ಮತ್ತು ಪಾಕ್ ಸೇನಾ ಅಧಿಕಾರಿಗಳ ಜೊತೆಗಿನ ಮಾತುಕತೆ ವೇಳೆ ಮೋದಿ ಅಮೆರಿಕ, ಇಸ್ರೇಲ್ ಜೊತೆಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಹೆಚ್ಚು ಕಳವಳ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.
ಪಿಕೆ ಜೈನ್ ಝೀ ನಿವೃತ್ತ ಐಪಿಎಸ್ ಅಧಿಕಾರಿ ಮಾಧ್ಯಮದೊಂದಿಗೆ ಮಾತನಾಡಿ, ಮೋದಿ ಅಧಿಕಾರಕ್ಕೆ ಬಂದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಪಾಕಿಸ್ತಾನ ಮತ್ತು ದಾವೂದ್ ಇಬ್ರಾಹಿಂಗೆ ಮಾನಸಿಕ ಒತ್ತಡ ಹೆಚ್ಚಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನಾ ಪಡೆ ಕಾರ್ಯಾಚರಣೆ ನಡೆಸುವ ಮೂಲಕ ಐಎಸ್ ಐ ಕೃಪಾಕಟಾಕ್ಷದಲ್ಲಿರುವ ದಾವುದ್ ಪತ್ತೆ ಹಚ್ಚಬಲ್ಲದು ಎಂಬ ಭಯ ಕಾಡತೊಡಗಿದೆಯಂತೆ. ಅಮೆರಿಕದ ಗುಪ್ತಚರ ಇಲಾಖೆ ಸಿಐಎ ಮತ್ತು ಇಸ್ರೇಲ್ ಭದ್ರತಾ ಏಜೆನ್ಸಿ ಮೊಸ್ಸಾದ್ ಭಾರತಕ್ಕೆ ನೆರವು ನೀಡುತ್ತದೆ ಎಂಬ ಭೀತಿ ದಾವೂದ್ ಗೆ ಇದ್ದಿರುವುದಾಗಿ ವಿಶ್ಲೇಷಿಸಿದ್ದಾರೆ.