ದಾವಣಗೆರೆ, ಆ.19 : ದಾವಣಗೆರೆಯಲ್ಲಿ ಭಾನುವಾರ ಸಂಜೆ ಧಾರಾಕಾರ ಮಳೆಯಾಗಿದೆ. ಸಂಜೆ 5 ರಿಂದ ಸುಮಾರು ಎರಡೂವರೆ ತಾಸಿಗೂ ಹೆಚ್ಚು ಕಾಲ ಬಿರುಸಿನ ಮಳೆಯಾಗಿದೆ. ರಸ್ತೆಗಳೆಲ್ಲ ಸಣ್ಣ ಝರಿಗಳಂತಾಗಿದ್ದರೆ ಚರಂಡಿಗಳೆಲ್ಲ ಜಲಾವೃತವಾಗಿದ್ದವು. ಜನಜೀವನ ಅಸ್ತವ್ಯಸ್ತವಾಗಿತ್ತು.ಇನ್ನೊಂದು ಪ್ಲಾಟ್ಫಾರಂ ಮೂಲಕ ಬಸ್ ಹೋಗುವ ಮತ್ತು ಬರುವ ವ್ಯವಸ್ಥೆ ಇತ್ತು. ವಾಹನ ಸಂಚಾರ ಸ್ಥಗಿತವಾಗಿರಲಿಲ್ಲ ಎಂದು ಕೆಎಸ್ಆರ್ಟಿಸಿ ಡಿಸಿ ಸಿದ್ದೇಶ್ವರ ತಿಳಿಸಿದರು.
ಅಗ್ನಿಶಾಮಕದಳದ ಕಚೇರಿ ಆವರಣದಲ್ಲಿ ಎರಡು ಅಡಿ ಆಳದ ನೀರು ತುಂಬಿತ್ತು. ಸಮೀಪದ ಪೆಟ್ರೋಲ್ ಬಂಕ್, ವಸತಿಗೃಹದ ಆವರಣ ಜಲಾವೃತವಾಗಿದ್ದವು. ಅಗ್ನಿಶಾಮಕ ದಳ ಪಕ್ಕದ ಸೇತುವೆ ಪಕ್ಕದ ರಸ್ತೆಯಲ್ಲಿ ಸಿಕ್ಕು ಹಾಕಿಕೊಂಡಿದ್ದ ಕಾರೊಂದನ್ನು ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ರಕ್ಷಣಾಕಾರ್ಯ ನಡೆಸಿ ಅದರಲ್ಲಿದ್ದ ನಾಲ್ವರು ಪ್ರಯಾಣಿಕರನ್ನು ರಕ್ಷಿಸಿದರು.