ದರ್ಶನ್, ಯಶ್ ವಿರುದ್ಧ ಸಿಎಂ ಸಿಡಿಮಿಡಿ

ದರ್ಶನ್, ಯಶ್ ವಿರುದ್ಧ ಸಿಎಂ ಸಿಡಿಮಿಡಿ

ಹಾಸನ, . 3, ನ್ಯೂಸ್ ಎಕ್ಸ್ ಪ್ರೆಸ್: ದರ್ಶನ್ ಹಾಗೂ ಯಶ್ ರವರು ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ  ಭರ್ಜರಿ ಪ್ರಚಾರ ನಡೆಸುತ್ತಿದ್ರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಸಿಡಿಮಿಡಿ ಗೊಂಡಿದ್ದಾರೆ.

ಮಂಡ್ಯದಲ್ಲಿ ದರ್ಶನ್, ಯಶ್ ಹಾಗೂ ನೆನೆಪಿರಲಿ ಪ್ರೇಮ್ ರೋಡ್ ಶೋ ನಡೆಸಿ, ಸುಮಲತಾ ಅವರನ್ನ ಬೆಂಬಲಿಸುವಂತೆ ಮನವಿ ಮಾಡಿದರು. ಈ ಕುರಿತು ಹಾಸನದಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಪ್ರಚಾರ ಮಾಡಲಿ ಬಿಡಿ, ಕಷ್ಟ ಅನ್ನೋದು ಗೊತ್ತಾಗಲಿ. ದಿನ ನಿತ್ಯ ಛತ್ರಿ ಹಿಡಿದು ಸಿನಿಮಾ ಶೂಟಿಂಗ್ನಲ್ಲಿರುತ್ತಿದ್ದರು. ಈಗ ಬಿಸಿಲಿಗೆ ಬಂದಿದ್ದಾರೆ. ಸ್ವಲ್ಪ ಸುತ್ತಾಡಲಿ, ನಮ್ಮ ರೈತರ ಕಷ್ಟ ಅರ್ಥವಾಗಲಿ ಅಂತಾ ವ್ಯಂಗ್ಯವಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos