ಬೆಂಗಳೂರು, ಅ.6 : ಬೆಂಗಳೂರಿನ ಈಸ್ಟ್ ಡಿವಿಜನ್ನಲ್ಲಿ ಕಿರಾತಕರ ಗ್ಯಾಂಗ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಸಿಲಿಕಾನ್ ಸಿಟಿ ಜನರೇ ಎಚ್ಚರವಾಗಿರಿ. ಅಪ್ಪಿತಪ್ಪಿಯೂ ಮನೆಯಿಂದಾಚೆ ಒಬ್ಬೊಬ್ಬರಾಗಿ ಕಾಲಿಡಬೇಡಿ. ಯಾಕೆಂದರೆ ರಾಜಧಾನಿಯಲ್ಲಿ ಡೆಂಜರ್ ಡೆಡ್ಲಿಗ್ಯಾಂಗ್ ಹುಟ್ಟಿಕೊಂಡಿದೆ.
ಈ ಗ್ಯಾಂಗ್ ಕ್ಷಣಮಾತ್ರದಲ್ಲೇ ತಮ್ಮ ಕೆಲಸ ಮುಗಿಸಿ ಎಸ್ಕೇಪ್ ಆಗುತ್ತಿದೆ. ಮಾರುವೇಷದಲ್ಲಿ ಬಂದು ಅಟ್ಯಾಕ್ ಮಾಡಿ ಕ್ಷಣಾರ್ಧದಲ್ಲಿಯೇ ಈ ಗ್ಯಾಂಗ್ ಮಾಯವಾಗುತ್ತದೆ. ಕಳೆದ ಒಂದು ವಾರದಲ್ಲಿ ಎರಡು-ಮೂರು ಕಡೆ ದಾಳಿ ಮಾಡಿದೆ. ಇಂದಿರಾ ನಗರ, ಬಾಣಸವಾಡಿಯಲ್ಲಿ ಪ್ರತ್ಯೇಕವಾಗಿ ದಾಳಿ ಮಾಡಿದೆ ಎಂದು ಶಂಕಿಸಲಾಗಿದೆ. ಖತರ್ನಾಕ್ ಗ್ಯಾಂಗಿನ ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.