ಬೆಂಗಳೂರು,ಡಿ. 30 : ನಟ ದನಂಜಯ್ ಹೇಳಿರುವ ನಿಂದು ಡೊಡ್ಡ ಮನಸ್ಸು ಕಣ್ಲ ಡೈಲಾಗ್ ಈಗ ಸಖತ್ ವೈರಲ್ ಆಗುತ್ತಿದೆ. ನಟ ಡಾಲಿ ಧನಂಜಯ್ ಅವರಿಗೆ ಪುಟ್ಟ ಬಾಲಕನೋರ್ವ 10 ರೂ. ಗಿಫ್ಟ್ ಕೊಟ್ಟಿದ್ದು, ಇದನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಹೌದು ನಟ ಡಾಲಿ ಧನಂಜಯ್ ಅವರು ಇತ್ತೀಚಿಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಪುಟ್ಟ ಬಾಲಕನೋರ್ವ ಧನಂಜಯ್ ಅವರ ಬಳಿ ಡೈಲಾಗ್ ಹೇಳಿಸಿ ನಂತರ ಅವರಿಗೆ ಹತ್ತು ರೂ. ಗಿಫ್ಟ್ ಆಗಿ ನೀಡಿದ್ದಾನೆ.
ಈ ವಿಚಾರವಾಗಿ ಹುಡುಗನ ಫೋಟೋ ಹತ್ತು ರೂ.ನೋಟನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಧನಂಜಯ್ ಅವರು, ತಾನು ಡೈಲಾಗ್ ಹೇಳಿ ನನ್ನ ಬಳಿಯೂ ಡೈಲಾಗ್ ಹೇಳಿಸಿ ಗಿಫ್ಟ್ ಕೊಟ್ಟ ಹುಬ್ಬಳ್ಳಿ ಹುಡುಗ.
ನಿನ್ನ ಪ್ರೀತಿ ಮತ್ತು ಗೌರವಕ್ಕೆ ಧನ್ಯವಾದಗಳು. ಒಂದು ರೂ. ಕೊಡದೇ ವರ್ಷಾನುಗಟ್ಟಲೇ ಕಲಾವಿದರನ್ನು ದುಡಿಸಿಕೊಳ್ಳುವರ ಮಧ್ಯೆ ನಿಂದು ದೊಡ್ಡ ಮನಸ್ಸು ಕಣ್ಲ ಎಂದು ಬರೆದುಕೊಂಡಿದ್ದಾರೆ. ಈಗ ಈ ಪೋಸ್ಟ್ ಸಖತ್ ವೈರಲ್ ಆಗಿದ್ದು, ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.