ಜೆಡಿಎಸ್‌ ಪಕ್ಷ ಸರಿ ಇಲ್ಲವೆಂದು ಬಿಜೆಪಿ ಸೇರಿದ ಬುದ್ಧಿವಂತ ಅಳಿಯ: ಡಿ.ಕೆ. ಸುರೇಶ್‌

ಜೆಡಿಎಸ್‌ ಪಕ್ಷ ಸರಿ ಇಲ್ಲವೆಂದು ಬಿಜೆಪಿ ಸೇರಿದ ಬುದ್ಧಿವಂತ ಅಳಿಯ: ಡಿ.ಕೆ. ಸುರೇಶ್‌

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್ ಮಂಜುನಾಥ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಡಿ.ಕೆ ಸುರೇಶ್, ಡಾ. ಸಿ.ಎನ್ ಮಂಜುನಾಥ್ ಅಚ್ಚರಿ ಅಭ್ಯರ್ಥಿ ಅಂತ ಅನ್ನಲ್ಲ. ಮಂಜುನಾಥ್ ದೇವೇಗೌಡರ ಕುಟುಂಬದ ಭಾಗ. ಮಂಜುನಾಥ್ ರಾಜಕೀಯ ಪ್ರವೇಶಕ್ಕೆ ಸ್ವಾಗತ. ಜಾಣ ಅಳಿಯ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದಾರೆ ಎಂದು ಟೀಕಿಸಿದರು.

ಮಂಜುನಾಥ ಅವರ ರಾಜಕೀಯ ಪ್ರವೇಶದ ಬಗ್ಗೆ ನೀವು ಅವರನ್ನೇ ಕೇಳಬೇಕು. ಅವರ ರಾಜಕೀಯ ಪ್ರವೇಶದ ಬಗ್ಗೆ ನಾನು ಉತ್ತರ ಹೇಳೋದು ಸಮಂಜಸ ಅಲ್ಲ. ಅವರ ರಾಜಕೀಯ ಪ್ರವೇಶವನ್ನು ಸ್ವಾಗತ ಮಾಡುತ್ತೇವೆ. ರಾಜಕಾರಣಿಯನ್ನು ರಾಜಕಾರಣದ ದೃಷ್ಟಿಯಿಂದ ನೋಡಬೇಕು.

ಇದು ದೇವೇಗೌಡರ ಕುಟುಂಬದ ಮತ್ತೊಂದು ಭಾಗ. ದೇವೇಗೌಡರ ಕುಟುಂಬದ ಮತ್ತೊಂದು ಭಾಗ ಆಗಿರೋದ್ರಿಂದ ಅಚ್ಚರಿ ಅಭ್ಯರ್ಥಿ ಅಂತ ಅನ್ನಲ್ಲ. ದೇವೇಗೌಡರ ಕುಟುಂಬದ ಭಾಗ ಬಿಜೆಪಿಯಲ್ಲಿ ಯಾಕೆ ಸ್ಪರ್ಧೆ ಎಂಬ ಪ್ರಶ್ನೆ ಎದ್ದಿದೆ. ದೇವೇಗೌಡರ ಪಾರ್ಟಿ, ಕುಮಾರಸ್ವಾಮಿ ಪಾರ್ಟಿ ಸರಿ ಇಲ್ಲ ಅಂತ ಬುದ್ಧಿವಂತ ಅಳಿಯ ತೀರ್ಮಾನ ಮಾಡಿದ್ದಾರೆ. ಅವರಿಗೆಲ್ಲಾ ದೇವರು ಒಳ್ಳೆಯದು ಮಾಡಲಿ ಎಂದು ಡಿಕೆ ಸುರೇಶ್ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos