ಮಂಡ್ಯ, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯದಲ್ಲಿ ಕೆಲವು ನಾಯಕರು ಆಡುತ್ತಿರುವ ಮಾತುಗಳು ಸಂಘರ್ಷಕ್ಕೂ ದಾರಿ ಮಾಡಿಕೊಡುತ್ತಿದೆ. ಅದು ಎಷ್ಟರ ಮಟ್ಟಿಗೆ ಕಿಚ್ಚನ್ನು ಹಬ್ಬಿಸಿದೆ ಎಂಬುದಕ್ಕೆ ಆಟೋದ ಹಿಂಭಾಗದಲ್ಲಿ ದರ್ಶನ್ ಫೋಟೋ ಹಾಕಿದ್ದಾರೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ಆ ಆಟೋದ ಎರಡು ಚಕ್ರಗಳನ್ನು ಬಿಚ್ಚಿಕೊಂಡು ಹೋಗಿರುವ ಘಟನೆಯೇ ಸಾಕ್ಷಿಯಾಗಿದೆ. ನಿಖಿಲ್ ಕುಮಾರಸ್ವಾಮಿ ಗೆದ್ದರೆ ಅಂಬರೀಶ್ ಆತ್ಮಕ್ಕೆ ಶಾಂತಿ: ಡಿಕೆಶಿ ಡಿ ಬಾಸ್ ಎಂದು ಬರೆಸಿಕೊಂಡಿದ್ದರು ದರ್ಶನ್ ಅಭಿಮಾನಿಯಾಗಿರುವ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿ ಸಂತೋಷ್ ತನ್ನ ಆಟೋ ಹಿಂಭಾಗದಲ್ಲಿ ದರ್ಶನ್ ಚಿತ್ರ ಹಾಕಿ ಡಿ ಬಾಸ್ ಎಂದು ಬರೆಸಿಕೊಂಡಿದ್ದರು. ಇದನ್ನು ನೋಡಿದ ಯಾರೋ ಕಿಡಿಗೇಡಿಗಳು ಚಾಲಕ ರಾತ್ರಿ ಆಟೋವನ್ನು ನಿಲ್ಲಿಸಿ ಹೋಗಿದ್ದ ವೇಳೆ ಸಮಯ ಸಾಧಿಸಿ ಅದರ ಎರಡು ಟಯರ್ ಗಳನ್ನು ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಆಟೋದ ಹಿಂಭಾಗದ ಎರಡು ಟಯರ್ ಗಳು ಇಲ್ಲದಿರುವುದು ಕಂಡು ಕಂಗಾಲಾಗಿದ್ದಾರೆ.