ಬೆಂಗಳೂರು: ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಇಡಿ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಚಾರ್ಜ್‌ಶೀಟ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿರುವ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ. ಈಗಾಗಲೇ ಬಿ ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾ ನೀಡಿ ಇಡಿ ವಶದಲ್ಲಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖವಾಗಿ ಬಿ ನಾಗೇಂದ್ರ ಅವರದೇ ಪಾತ್ರವಿದೆ ಎಂದು ಉಲ್ಲೇಖವಾಗಿದೆ.
ಹೌದು, ರಾಜ್ಯ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 196 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಕಾಂಗ್ರೆಸ್ ಮಾಜಿ ಸಚಿವ ಬಿ. ನಾಗೇಂದ್ರ ಅವರ ಕೈವಾಡ ಇರುವುದು ಖಚಿತವಾಗಿದೆ.
ಒಟ್ಟು 5,114 ಪುಟಗಳಲ್ಲಿ 15 ಸಾಕ್ಷಿಗಳ ಹೇಳಿಕೆ ಸಹಿತ ಚಾರ್ಜ್‌ಶೀಟ್ ಅನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ಬಿ.ನಾಗೇಂದ್ರ, ಸತ್ಯನಾರಾಯಣ ವರ್ಮಾ (ಹೈದರಾಬಾದ್), ಎಟಕರಿ ಸತ್ಯನಾರಾಯಣ (ತೆಲಂಗಾಣ), ಜೆ ಜಿ ಪದ್ಮನಾಭ (ಪಾಲಿಕೆಯ ಮಾಜಿ ಎಂಡಿ) ಸೇರಿದಂತೆ 20 ಮಂದಿಯ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಇನ್ನು ಮಾಜಿ ಸಚಿವ ಸೇರಿದಂತೆ ಈ ಮೇಲಿನ ಎಲ್ಲ ಆರೋಪಿಗಳಿಂದ ಬಹುಕೋಟಿ ಹಗರಣ ನಡೆದಿದೆ. ಈ ಪೈಕಿ ನಿಗಮದ 20 ಕೋಟಿ ಹಣವನ್ನು ಲೋಕಸಭಾ ಚುನಾವಣೆಗೆ ಬಳಕೆ ಮಾಡಲಾಗಿದೆ. ಚುನಾವಣೆ ಹೊತ್ತಲ್ಲಿ ತೆಲಂಗಾಣದಲ್ಲಿ ಮದ್ಯ ಖರೀದಿಗೆ ಇಷ್ಟೊಂದು ಹಣ ಬಳಕೆ ಆಗಿರುವುದು, ಬಿ.ನಾಗೇಂದ್ರ ಆಪ್ತ ಸಹಾಯಕ ವಿಜಯ್ ಕುಮಾರ್ ಗೌಡ ಮೊಬೈಲ್ ನಲ್ಲಿ ಸಿಕ್ಕ ಸಾಕ್ಷ್ಯಗಳಿಂದ ರುಜುವಾತಾಗಿದೆ.
ಪ್ರಕರಣದಲ್ಲಿ ಮುಖ್ಯವಾಗಿ ನಿಗಮಕ್ಕೆ ಪದ್ಮನಾಭ ಎಂಬುವವರನ್ನು ನೇಮಕ ಮಾಡುವುದರೊಂದಿಗೆ ಕೋಟಿ ಕೋಟಿ ಲೂಟಿಗೆ ಆರೋಪಿಗಳು ಸಂಚು ಮಾಡಿದ್ದಾರೆ. ಇದರಲ್ಲಿ ಮಾಜಿ ಸಚಿವ ಬಿ.ನಾಗೇಂದ್ರರು ಪ್ರಮುಖ ಪಾತ್ರ ವಹಿಸಿರುವುದುತ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ಮಾಜಿ ಸಚಿವರನ್ನೇ ಪ್ರಧಾನ ಆರೋಪಿಯನ್ನಾಗಿ ಮಾಡಲಾಗಿದೆ.