ಕೆಎಸ್ಆರ್ಟಿಸಿ ಬಸ್-ವ್ಯಾನ್ ಡಿಕ್ಕಿ; ಮೂವರು ಸಾವು

ಕೆಎಸ್ಆರ್ಟಿಸಿ ಬಸ್-ವ್ಯಾನ್ ಡಿಕ್ಕಿ; ಮೂವರು ಸಾವು

ಹಾಸನ, ಮಾ.13, ನ್ಯೂಸ್ ಎಕ್ಸ್ ಪ್ರೆಸ್: ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ಹಾಗೂ ಮಾರುತಿ ವ್ಯಾನ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಅರಸೀಕೆರೆ ತಾಲ್ಲೂಕು ದೇವರಸನಹಳ್ಳಿ ಬಳಿ ತಡರಾತ್ರಿ 1:30ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಮುಜೀಬಾ(53), ಮಹಮದ್ ಸಾಧಿಖ್(22), ಮುಷ್ಕಾನ್(19) ಮೃತರು.

ತುಮಕೂರು ಜಿಲ್ಲೆ ಮಧುಗಿರಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ. ಗಾಯಾಳುಗಳಾದ ಶಾಲಿನ್ ಭಾನು, ಇಮ್ರಾನ್ ಅಹಮದ್, ಶಾಲಿನ್ ತಾಜ್, ಮೊಹಮ್ಮದ್ ಶಾಲಿನ್ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos