ಮುಂಬೈ, ಮಾ. 29, ನ್ಯೂಸ್ ಎಕ್ಸ್ ಪ್ರೆಸ್: 75 ವರ್ಷದ ವೃದ್ಧ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದವನಿಗೆ 10 ವರ್ಷ ಜೈಲು ಶಿಕ್ಷ ವಿಧಿಸಿ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ. 2016ರ ಏಪ್ರಿಲ್ 12ರಂದು ಆತನ ಪಕ್ಕದ ಮನೆಯ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಆತನ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು.
ಮಗುವಿನ ಹೇಳಿಕೆ, ವೈದ್ಯಕೀಯ ವರದಿ ಪ್ರಕಾರ ಅಂದೇ ಆತನನ್ನು ಬಂಧಿಸಲಾಗಿತ್ತು.ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಸಹ ಹಾಕಿದ್ದ ಎಂದು ಆರೋಪಿಸಲಾಗಿತ್ತು.
ಅತ್ಯಾಚಾರದ ಬಳಿಕ ಬಾಲಕಿ ಅಳುತ್ತಿರುವುದನ್ನು ಗಮಸಿದ ಪೋಷಕರು, ನಡೆದ ಘಟನೆ ಬಗ್ಗೆ ಬಾಲಕಿಯನ್ನು ಕೇಳಿ ತಿಳಿದುಕೊಂಡರು. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಕಾಮುಕನ ವಿರುದ್ಧ ದೂರು ದಾಖಲಿಸಿದ್ದರು.