ಬೆಂಗಳೂರು, ಜು. 30: ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ಆರೋಪಿಗಳ ಬಂಧನ.
ಬೈಕ್ ಅಡ್ಡಗಟ್ಟಿ ದರೋಡೆಕೋರರಿಂದ ಹಣಕ್ಕಾಗಿ ವ್ಯಕ್ತಿಯ ಕೊಲೆ. ಹಣ ತೆಗೆದುಕೊಂಡು ಹೋಗ್ತಿದ್ದ ವ್ಯಕ್ತಿಯ ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಹೊಸಕೋಟೆ ತಾಲೂಕಿನ ಶಿವನಾಪುರ ಕ್ರಾಸ್ ಬಳಿ ಇಂದು ಬೆಳಗ್ಗೆ 8.30 ಸಮಯದಲ್ಲಿ ಕೊಲೆ ನಡೆದಿತ್ತು. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿ ಸತತ ಹುಡುಕಾಟದ ನಂತರ ಆರೋಪಿಗಳನ್ನು ಬಂಧಿಸಲಾಯಿತು ಎಂದು ತಿಳಿದು ಬಂದಿದೆ. ಬಂಗಾರಪೇಟೆ ಮೂಲದ ಗೋದ್ರೇಜ್ ಚಿಕನ್ ಕಂಪನಿ ಸೂಪರ್ ವೈಸರ್ ಬೈರೆಗೌಡ ಕೊಲೆಯಾದ ವ್ಯಕ್ತಿ. ಕೋಳಿಗಳನ್ನ ಲೋಡ್ ಮಾಡಿ ಕಳಿಸಿ ಹಣ ತೆಗೆದುಕೊಂಡು ಹೋಗ್ತಿದ್ದ ವೇಳೆ ಘಟನೆ ನಡೆದಿದೆ. ಲಕ್ಷಾಂತರ ರೂಪಾಯಿ ಹಣ ದೋಚಿ ಪರಾರಿಯಾಗಿರೂವ ಖಧೀಮರು. ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.