ಡಿಕೆಶಿ ಬ್ರದರ್ಸ್ ಎದುರಿಸುವ ಛಲ ನಮ್ಮಲ್ಲಿದೆ: ಸಿ.ಪಿ.ಯೋಗೀಶ್ವರ್

ಡಿಕೆಶಿ ಬ್ರದರ್ಸ್ ಎದುರಿಸುವ ಛಲ ನಮ್ಮಲ್ಲಿದೆ: ಸಿ.ಪಿ.ಯೋಗೀಶ್ವರ್

ಕನಕಪುರ, ಮಾ.21,  ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ಗ್ರಾಮಾಂತರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನನಗೆ ಯಾವುದೇ ಭಯ ಹಾಗೂ ಆತಂಕವಿಲ್ಲ. ಡಿ.ಕೆ.ಸಹೋದರರ ವಿರುದ್ಧ ಚುನಾವಣೆ ಎದುರಿಸುವ ಛಲ ನಮ್ಮಲ್ಲಿದೆ ಎಂದು ಸಿ.ಪಿ.ಯೋಗೀಶ್ವರ್ ಹೇಳಿದ್ದಾರೆ.

ನಗರದ ಎವಿಆರ್ ರಸ್ತೆಯಲ್ಲಿ ಬಿಜೆಪಿ ನೂತನ ಕಚೇರಿ ಉದ್ಘಾಟಿಸಿ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರ ದಾಸ್ಯ ಹಾಗೂ ಧಮನಕಾರಿ ನೀತಿಯ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ.

ನಾನು ಸಹ ಸುದೀರ್ಘ ರಾಜಕೀಯ ಮಾಡಿಕೊಂಡು ಬಂದು ಸೋಲು-ಗೆಲುವನ್ನು ಕಂಡಿದ್ದೇನೆ. ರಾಜಕೀಯದ ಎಲ್ಲಾ ಪಟ್ಟುಗಳನ್ನು ತಿಳಿದಿರುವ ನಾನು ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಸ್ವೀಕರಿಸಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos