ತಾಲ್ಲೂಕು ಕಚೇರಿ ದಾರಿ ಸರಿಪಡಿಸಿ

  • In State
  • August 31, 2021
  • 583 Views
ತಾಲ್ಲೂಕು ಕಚೇರಿ ದಾರಿ ಸರಿಪಡಿಸಿ

ಚಿಂಚೋಳಿ : ಪಟ್ಟಣದ ಚಂದಾಪುರದ ತಹಶೀಲ್ದಾರ್, ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳಕ್ಕೆ ಹೋಗುವ ದಾರಿಯನ್ನು ಸರಿಪಡಿಸುವಂತೆ ಬಹುಜನ ಸಮಾಜ ಪಾರ್ಟಿ ಚಿಂಚೋಳಿ ಘಟಕ ಅಧ್ಯಕ್ಷ ವೈಜನಾಥ ಮಿತ್ರಾ ಆಗ್ರಹಿಸಿದರು. ಸುಮಾರು ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈವರೆಗೂ ಸರಿಯಾದ ರಸ್ತೆ ನಿರ್ಮಾಣ ಮಾಡಿಲ್ಲ. ಅಧಿಕಾರಿಗಳು ಸಹ ಇದನ್ನು ಕಡೆಗಣಿಸುತ್ತಿದ್ದಾರೆ. ಕೂಡಲೇ ರಸ್ತೆ ನಿರ್ಮಾಣ ಮಾಡಬೇಕು, ಇಲ್ಲವಾದರೆ ಬಿ. ಎಸ್.ಪಿ ಘಟಕ ವತಿಯಿಂದ ತಾಲ್ಲೂಕಿನ ಶಿಕ್ಷಕರ, ಪಾಲಕ, ವಿದ್ಯಾರ್ಥಿಗಳ ಪರವಾಗಿ ಹೋರಾಟಕ್ಕೆ ಸಿದ್ದರಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos