ಕಾಂಗ್ರೆಸ್ ಸೇರ್ಪಡೆಯಾದ ರವೀಂದ್ರ ಜಡೇಜಾ ತಂದೆ, ಸಹೋದರಿ

ಕಾಂಗ್ರೆಸ್ ಸೇರ್ಪಡೆಯಾದ ರವೀಂದ್ರ ಜಡೇಜಾ ತಂದೆ, ಸಹೋದರಿ

ಗುಜರಾತ್, . 15, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯ ದಿನಗಣನೆ ಶುರುವಾಗಿದ್ದು, ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಬಿಜೆಪಿ ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೇ ಜಡೇಜಾ ತಂದೆ, ಸಹೋದರಿ ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಆದರೆ, ಅವರಿಬ್ಬರು ಸೇರಿರೋದು ಬಿಜೆಪಿಯಲ್ಲ. ಜಡೇಜಾ ತಂದೆ ಮತ್ತು ಸಹೋದರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಗುಜರಾತ್ನ ಜಾಮ್ನಗರ್ ಕ್ಷೇತ್ರದಲ್ಲಿ ನಡೀತಿದ್ದ ಱಲಿಯಲ್ಲಿ ಇಬ್ಬರೂ ಕಾಂಗ್ರೆಸ್ ಸೇರ್ಪಡೆಯಾದ್ರು. ಈ ವೇಳೆ ಜಾಮ್ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುಳು ಕಾಂಡೋರಿಯಾ ಹಾಗೂ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಸೇರಿದಂತೆ ಹಲವು ಸ್ಥಳೀಯ ನಾಯಕರು ಹಾಜರಿದ್ರು. ಇದೇ ಕ್ಷೇತ್ರದಿಂದ ಹಾರ್ದಿಕ್ ಪಟೇಲ್ನನ್ನ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದ್ರೆ, ಹಾರ್ದಿಕ್ ಸ್ಪರ್ಧೆಗೆ ಕಾನೂನು ತೊಡಕು ಎದುರಾಗಿದ್ದರಿಂದ, ಈ ಕ್ಷೇತ್ರಕ್ಕೆ ಮುಳು ಕಾಂಡೋರಿಯಾರನ್ನ ಕಾಂಗ್ರೆಸ್ ಅಭ್ಯರ್ಥಿ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos