ಕಾಂಗ್ರೆಸ್ ಪಕ್ಷಕ್ಕೆ ನಾನು ಮೋಸ ಮಾಡಲ್ಲ: ಬಿ.ನಾಗೇಂದ್ರ

ಕಾಂಗ್ರೆಸ್ ಪಕ್ಷಕ್ಕೆ ನಾನು ಮೋಸ ಮಾಡಲ್ಲ: ಬಿ.ನಾಗೇಂದ್ರ

ಬಳ್ಳಾರಿ, ಏ. 8, ನ್ಯೂಸ್ ಎಕ್ಸ್ ಪ್ರೆಸ್:  ವಿಧಾನಸಭೆ ಚುನಾವಣೆಯಲ್ಲಿ ನನಗೆ ಕಡಿಮೆ ಮತಗಳು ಬಂದವು, ಅದು ನನ್ನ ಸ್ವಯಂಕೃತ ಅಪರಾಧ. ನಾನೂ ಯಾರನ್ನೂ ದೂಷಿಷಲು ಹೋಗಲ್ಲ ಎಂದು ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.

ನಮ್ಮಲ್ಲಿ ಅತೃಪ್ತರು ಅಂತ ಯಾರೂ ಇಲ್ಲ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಾಳೆ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುತ್ತೇನೆ. ಎಲ್ಲ ಶಾಸಕರೂ ಅವರವರ ತಾಲೂಕುಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಯಾರಲ್ಲೂ ಅಸಮಾಧಾನ ಇಲ್ಲ. ಯಾವುದೇ ಗೊಂದಲ ಇಲ್ಲ ಎಂದರು.

ಉಗ್ರಪ್ಪಗೆ ಬಳ್ಳಾರಿ ಎಬಿಸಿಡಿ ಗೊತ್ತಿಲ್ಲ ಎಂಬ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,  ಜಿಲ್ಲೆಯಲ್ಲಿ ಪ್ರಬುದ್ಧ ಮತದಾರರಿದ್ದಾರೆ. ಶೆಟ್ಟರ್ ಅವರು ಯಾಕೆ ಹೀಗೆ ಹೇಳಿದರೋ ಗೊತ್ತಿಲ್ಲ.  ಕ್ಷೇತ್ರದ 2 ಅಭ್ಯರ್ಥಿಗಳನ್ನ ತುಲನೆ ಮಾಡಿದಾಗ ಯಾರೂ ಒಳ್ಳೆ ಅಭ್ಯರ್ಥಿ ಯಾರು ಅನ್ನೋದನ್ನ ಜನ ನಿರ್ಧಾರ ಮಡುತ್ತಾರೆ.

ನಾಳೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸಮಾವೇಶ ನಡೆಸುತ್ತೇವೆ ಎಂದರು.

ಈಗ ಸಮ್ಮಿಶ್ರ ಸರ್ಕಾರ ಇದೆ. ಕೆಲವರು ನಮ್ಮ ಸರ್ಕಾರದ ಬಗ್ಗೆ ಮತ್ತು ನನ್ನ ಬಗ್ಗೆ ಕೆಲವು ತಪ್ಪುಗಳನ್ನು ಹುಡುಕುತ್ತಿದ್ದಾರೆ. ಲೋಕಸಭೆ ಉಪಚುನಾವಣೆಯಲ್ಲಿ ತಪ್ಪು ಸರಿಪಡಿಸಿಕೊಂಡು ಉಗ್ರಪ್ಪಗೆ 30 ಸಾವಿರ ಲೀಡ್ ಮತಗಳು ಕೊಡಿಸಿದ್ದೇವೆ. ಉಪಚುನವಣೆ ಬೇರೆ, ಸಾರ್ವತ್ರಿಕ ಚುನಾವಣೆ ಬೇರೆ. ಈ ಚುನಾವಣೆ ವೇಳೆ ಕಾಂಗ್ರೆಸ್ಸಿನವರು ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಬೇಕು. ಮತದಾನ ಮಾಡುವುದರಲ್ಲಿ ಕೂಡ ಪಾವಿತ್ರ್ಯತೆ ಇದೆ. ಇಂದು ನಮ್ಮ ಮನೆ ಮಗಳನ್ನು ಮದುವೆ ಮಾಡಿ ಕೊಡಬೇಕಾದರೇ, ಹತ್ತಾರು ಕಡೆ ವಿಚಾರಿಸ್ತೇವೆ ಹಾಗೆಯೇ ಮತ ಹಾಕಬೇಕಾದರೇ, ಉತ್ತಮರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos