ಕಾಂಗ್ರೆಸ್ ನ 10 ಶಾಸಕರು ಬಿಜೆಪಿಗೆ

ಕಾಂಗ್ರೆಸ್ ನ 10  ಶಾಸಕರು ಬಿಜೆಪಿಗೆ

ಪಣಜಿ, ಜೂನ್. 13: ಗೋವಾದಲ್ಲಿ 10 ಮಂದಿ ಕಾಂಗ್ರೆಸ್‌ ಶಾಸಕರು ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ಹೀಗೆಂದು ಗೋವಾ ಬಿಜೆಪಿ ಅಧ್ಯಕ್ಷ ವಿನಯ ತೆಂಡುಲ್ಕರ್‌ ಬುಧವಾರ ಹೇಳಿಕೊಂಡಿದ್ದಾರೆ.

15 ದಿನಗಳಿಂದ ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಗತ್ಯ ಇರುವ ಬಹುಮತ ಹೊಂದಿದೆ. ಹೀಗಾಗಿ, ಅವರ ಬೇಡಿಕೆ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ. ಮೈತ್ರಿ ಪಕ್ಷಗಳ ನೆರವಿನಿಂದ ಸರಕಾರ ತನ್ನ ಅವಧಿಯನ್ನೂ ಪೂರೈಸಲಿದೆ ಎಂದಿದ್ದಾರೆ. ಆದರೆ ಗೋವಾ ಕಾಂಗ್ರೆಸ್‌ ಮುಖ್ಯಸ್ಥ ಗಿರೀಶ್‌ ಚೋದಂಕರ್‌ ಬಿಜೆಪಿ ನಾಯಕ ವಿನಯ ತೆಂಡುಲ್ಕರ್‌ ಹೇಳಿಕೆ ತಿರಸ್ಕರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos