ಸಂಸದೀಯ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಆಯ್ಕೆ

ಸಂಸದೀಯ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಆಯ್ಕೆ

ನವದೆಹಲಿ, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿ  ಸೋಲಿನ ಹಿನ್ನಲೆ ಇಂದು ಬೆಳಗ್ಗೆ ನಡೆದ ಕಾಂಗ್ರೆಸ್‌  ಸಂಸದೀಯ ಸಭೆಯಲ್ಲಿ ಸಂಸದೀಯ ಪಕ್ಷದ ನಾಯಕಿಯಾಗಿ ಮತ್ತೊಮ್ಮೆ ಸೋನಿಯಾ ಗಾಂಧಿ ಅವರನ್ನು ಆಯ್ಕೆಯಾಗಿ ಸಂಸದೀಯ ಪಕ್ಷದ ಸಭೆಯಲ್ಲಿ ನಿರ್ಧಾರ ಮಾಡಿದೆ.

ಸಂಸತ್‌ ಭವನದ ಸೆಂಟ್ರಲ್‌ ಹಾನ್‌ನಲ್ಲಿ ನಡೆದ ಕಾಂಗ್ರೆಸ್‌ ಸಂಸದರ ಸಭೆಯಲ್ಲಿ  ಆಯ್ಕೆ ಮಾಡಲಾಗಿದೆ.  ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ನೂತನ 52 ಮಂದಿ ಕಾಂಗ್ರೆಸ್‌ ಸಂಸದರು, ರಾಜ್ಯಸಭಾ ಸದಸ್ಯರು ಭಾಗಿಯಾಗಿದ್ದರು. ಸೋನಿಯಾ ಅವರು ಯುಪಿಎ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.  ರಾಯ್‌ ಬರೇಲಿ ಕ್ಷೇತ್ರದಿಂದ 1.67 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಂಸತ್‌ ಕಲಾಪದಲ್ಲಿ ಆಡಳಿತ ಪಕ್ಷದ ವಿರುದ್ಧ ಯಾವ ವಿಚಾರಗಳನ್ನು ಎತ್ತಬೇಕು ಎನ್ನುವ ಕುರಿತೂ ಚರ್ಚೆ ನಡೆಸಲಾಗಿದೆ.  ಪ್ರಮುಖವಾಗಿ ಆರ್ಥಿಕ ಕುಂಠಿತ, ನಿರುದ್ಯೋಗ ಮತ್ತು ಇತರ ಕೆಲ ವಿಚಾರಗಳನ್ನು ಹೋರಾಟಕ್ಕೆ ಅಸ್ತ್ರವನ್ನಾಗಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos