ನವದೆಹಲಿ, ಜೂ. 26 : ಪ್ರಧಾನಿ ಮೋದಿ, 17ನೇ ಲೋಕಸಭೆಯ ಮೊದಲ ಅಧಿವೇಶನದ ವೇಳೆ ಕಾಂಗ್ರೆಸ್ ನಾಯಕರನ್ನು ಭರ್ಜರಿಯಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಭಾಷಣ ಮಾಡಿದ ಪ್ರಧಾನಿ ಮೋದಿ, ತುರ್ತುಪರಿಸ್ಥಿತಿ, ಹಿರಿಯ ನಾಯಕರಿಗೆ ಗೌರವ ಸಲ್ಲಿಸದ ಕಾಂಗ್ರೆಸ್‌ನ ಪರಿಪಾಠ, ಕೇವಲ ಗಾಂಧೀ ನೆಹರೂ ಕುಟುಂಬದ ಓಲೈಕೆ, ತ್ರಿವಳಿ ತಲಾಖ್ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರಿಗೆ ಮಾತಿನ ಪಂಚ್ ನೀಡಿದರು. ತಮ್ಮ ವಿರುದ್ಧ ಕೀಳು ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್‌ಗೆ ತಿರುಗೇಟು ನೀಡಿದ ಮೋದಿ, ‘ನೀವು ಎಷ್ಟು ಎತ್ತರಕ್ಕೆ ಏರುತ್ತೀರೋ, ನಾನು ಅಷ್ಟೇ ಸಂತೋಷಪಡುತ್ತೇನೆ’ ಎಂದು ಹೇಳಿದರು.
ಸೋನಿಯಾ, ರಾಹುಲ್ ಜೈಲಿಗೆ ಹಾಕೋದು ನಾವಲ್ಲ ಕೆಲ ವ್ಯಕ್ತಿಗಳನ್ನು ಸೋನಿಯಾ, ರಾಹುಲ್ ಜೈಲಿಗೆ ಕಳುಹಿಸದೇ ಇದ್ದದ್ದಕ್ಕೆ ನಮ್ಮನ್ನು ಟೀಕಿಸಲಾಗುತ್ತಿದೆ. ಇದಕ್ಕೆ ಕಾರಣವೇನೆಂದರೆ, ಯಾರನ್ನು ಬೇಕಾದರೂ ಜೈಲಿಗೆ ತಳ್ಳುವ ತುರ್ತು ಪರಿಸ್ಥಿತಿ ಸಮಯವಲ್ಲ. ಈ ವಿಷಯವನ್ನು ನ್ಯಾಯಾಂಗ ನಿರ್ವಹಿಸುತ್ತದೆ.