ಕಮಾಂಡ್ ಸೆಂಟರ್ ಗೆ ಆಯುಕ್ತರ ಭೇಟಿ

 ಕಮಾಂಡ್ ಸೆಂಟರ್ ಗೆ ಆಯುಕ್ತರ ಭೇಟಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೂರ್ವ ವಲಯ ವ್ಯಾಪ್ತಿಯಲ್ಲಿ ಕೋವಿಡ್-೧೯ ಸಂಬಂಧಿಸಿದಂತೆ ಆಯುಕ್ತರು ಪೂರ್ವ ವಲಯ ಕೋವಿಡ್ ಕಮಾಂಡ್ ಸೆಂಟರ್(ಅಕ್ಕಮಹಾದೇವಿ ಸಭಾಗಂಣ)ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಪೂರ್ವ ವಲಯ ಜಂಟಿ ಆಯುಕ್ತರು ಶ್ರೀಮತಿ ಪಲ್ಲವಿ, ಆರೋಗ್ಯಾಧಿಕಾರಿ ಶ್ರೀ ಸಿದ್ದಪ್ಪಾಜಿ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಪೂರ್ವ ವಲಯದ ಕೋವಿಡ್ ಕಮಾಂಡ್ ಸೆಂಟರ್‌ಗೆ ಆಯುಕ್ತರು ಭೇಟಿ ನೀಡಿ ಕಾಂಟ್ಯಾಕ್ಟ್ ಟ್ರೇಸಿಂಗ್, ಹೋಮ್ ಐಸೋಲೇಶನ್ ನಲ್ಲಿರುವವರ ಮೇಲೆ ನಿಗಾವಹಿಸುವ, ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ, ಗಂಟಲು ದ್ರವಮಾದರಿ ಪರೀಕ್ಷೆ ಮಾಡುವ ಬಗ್ಗೆ ಆಯುಕ್ತರು ಮಾಹಿತಿ ಪಡೆದರು.
ಕಮಾಂಡ್ ಸೆಂಟರ್‌ನಲ್ಲಿ ಸಿಬ್ಬಂದಿಯ ಕಾರ್ಯವೈಕರಿ ಪರಿಶೀಲನೆ ನಡೆಸಿ, ಹೋಮ್ ಐಸೋಲೇಶನ್‌ನಲ್ಲಿ ಎಷ್ಟು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಹೋಮ್ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುವವರರ ಬಗ್ಗೆ ಇಂಡೆಕ್ಸ್ ತಂತ್ರಾಶದಲ್ಲಿ ಮಾಹಿತಿ ಬರಲಿದ್ದು, ಅದಕ್ಕಾಗಿ ಪೂರ್ವವಲಯ ವ್ಯಾಪ್ತಿಗೊಳಪಡುವ ವಿಧಾನಸಭಾ ಕ್ಷೇತ್ರಕೊಬ್ಬ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಸರಿಯಾಗಿ ಆಗುತ್ತಿದೆಯಾ, ಆಸ್ಪತ್ರೆಗಳಲ್ಲಿ ಸಾಮಾನ್ಯ, ಹೆಚ್.ಡಿ.ಯು, ವೆಂಟಿಲೇಟರ್ ಹಾಗೂ ಐ.ಸಿ.ಯು ಇರುವ ಬಗ್ಗೆ ಸಮರ್ಪಕ ಮಾಹಿತಿ ಪಡೆದು ಸೋಂಕಿತರನ್ನು ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿವಹಿಸುವ ನೋಡಲ್ ಅಧಕಾರಿಗಳ ಜೊತೆ ಮಾತನಾಡಿ ಹಾಸಿಗೆಯನ್ನು ಕಾಯ್ದಿರಿಸಿ ಸೋಂಕು ಧೃಡಪಟ್ಟವರನ್ನು ಆಸ್ಪತ್ರೆಗೆ ಕಳುಹಿಸಬೇಕು. ಪಾಲಿಕೆಯ ಪೋರ್ಟಲ್‌ನಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಇದೆ ಎಂಬ ಮಾಹಿತಿ ಲಭ್ಯವಾಗಲಿದ್ದು, ಆ ಮೂಲಕ ಯಾರಿಗೂ ತೊಂದರೆಯಾಗದಂತೆ ಸರಿಯಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಯಮಾನುಸಾರ ದಂಡ ವಿಧಿಸಲು ಸೂಚನೆ: ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಇರುವವರಿಂದ ದಂಡ ಸಂಗ್ರಹಿಸುತ್ತಿರುವ ಬಗ್ಗೆ ಮಾರ್ಷಲ್ ಗಳ ಜೊತೆ ಆಯುಕ್ತರು ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆಯಿದ್ದರೆ ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ೧,೦೦೦ ರೂ. ದಂಡವನ್ನು ವಿಧಿಸಿ. ಸಾರ್ವಜನಿಕರು ಮನೆಯಿಂದಾಚೆ ಬಂದರೆ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಿ ಎಂದು ಸೂಚನೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos