‘ಕೈ’ ಗೆ ಅಧಿಕಾರ ತಪ್ಪಿಲು ‘ದಳ’ ಪ್ಲಾನ್!

‘ಕೈ’ ಗೆ ಅಧಿಕಾರ  ತಪ್ಪಿಲು ‘ದಳ’ ಪ್ಲಾನ್!

ಮಂಡ್ಯ : ಜೂನ್.5, ನ್ಯೂಸ್ ಎಕ್ಸ್ ಪ್ರೆಸ್ : ಅಧ್ಯಕ್ಷ ಸ್ಥಾನದ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಗೆ ಅಧಿಕಾರ ತಪ್ಪಿಸಲು ಜೆಡಿಎಸ್ ರಣತಂತ್ರ ರೂಪಿಸುತ್ತಿದೆ. 23 ಸದಸ್ಯ ಬಲದ ಕೆ.ಆರ್.ಪೇಟೆ ಪುರಸಭೆಯಲ್ಲಿ ಮ್ಯಾಜಿಕ್ ಸಂಖ್ಯೆ 12 ಆಗಿದ್ದು, ಜೆಡಿಎಸ್ 11 ಸ್ಥಾನ ಹೊಂದಿದೆ ಕೆ.ಆರ್.ಪೇಟೆ ಪುರಸಭೆಯಲ್ಲಿ ಅಧಿಕಾರ ಗದ್ದುಗೆಗೆ ಏರಲು ಜೆಡಿಎಸ್ ಕಸರತ್ತು ನಡೆಸುತ್ತಿದ್ದು, 11 ಜೆಡಿಎಸ್ ಸದಸ್ಯರು, ಓರ್ವ ಪಕ್ಷೇತರರನ್ನು ರೆಸಾರ್ಟ್ ಗೆ ಶಿಪ್ಟ್ ಮಾಡಲಾಗಿದೆ.    ಕಾಂಗ್ರೆಸ್ 10 ಸ್ಥಾನ ಪಡೆದಿದ್ದು, ಓರ್ವ ಪಕ್ಷೇತರ, ಓರ್ವ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದು, ಅಧಿಕಾರ ಪಡೆಯಲು ಕಸರತ್ತು ಜೋರಾಗಿದೆ.  ಒಟ್ಟು 11 ಜೆಡಿಎಸ್ ಸದಸ್ಯರು ಹಾಗೂ ಓರ್ವ ಪಕ್ಷೇತರರನ್ನು ಮುಂಬೈಗೆ ಕರೆದೊಯ್ದಿದ್ದ ಜೆಡಿಎಸ್ ಶಾಸಕ ನಾರಾಯಣ ಗೌಡ ಇದೀಗ ಬೆಂಗಳೂರು ರೆಸಾರ್ಟ್ ಗೆ ಶಿಫ್ಟ್ ಮಾಡಿದ್ದಾರೆ. ಶಾಸಕ ನಾರಾಯಣ ಗೌಡರು ಪ್ಲಾನ್ ಮಾಡುತ್ತಿದ್ದು, 20 ವರ್ಷಗಳಿಂದ ಕಾಂಗ್ರೆಸ್ ವಶದಲ್ಲಿದ್ದ ಕೆ.ಆರ್.ಪೇಟೆ ಪುರಸಭೆಯಲ್ಲಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆ ಅಧಿಕಾರ ಹಿಡಿಯಲು ಜೆಡಿಎಸ್ ಪ್ಲಾನ್ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos