ಬೆಂಗಳೂರು: ಬೆಂಗಳೂರಿನ ಸ್ಟಾರ್ ಹೋಟೆಲ್ ಸಿಬ್ಬಂದಿಯ ಮಹಾ ಎಡವಟ್ಟು ನಡೆದಿದೆ. ಪ್ರತಿಷ್ಠಿತ ಹೋಟೆಲ್ನ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ರಾಜ್ ಭವನದ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್ ಊಟಕ್ಕೆ ಅಂತ ಹೋಗಿದ್ದ ಹೈಕೋರ್ಟ್ ವಕೀಲೆ ಶೀಲಾ ದೀಪಕ್ ಪನ್ನೀರ್ ಗ್ರೇವಿಯನ್ನು ಆರ್ಡರ್ ಮಾಡಿದ್ದರು. ಪನ್ನೀರ್ ಗ್ರೇವಿಯಲ್ಲಿ ಜಿರಳೆ ಪತ್ತೆಯಾಗಿರುವುದನ್ನೂ ಕಂಡಿ ವಕೀಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆರಡು ತುತ್ತು ತಿನ್ನುತ್ತಿದ್ದಂತೆ ಪತ್ತೆಯಾದ ಜರಳೆ ಕಂಡು ಬಂದಿದೆ. ಜಿರಳೆ ಕಂಡು ವಕೀಲೆ ಹೋಟಲ್ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಹೋಟೆಲ್ ಮಾಲೀಕರು ಬೇರೆ ಊಟ ತಂದು ಕೊಟ್ಟರು. ನಿನ್ನೆ ಸಂಜೆ 5:00 ಸುಮಾರಿಗೆ ನಡೆದಂತಹ ಘಟನೆ.