ವಿ. ಸೋಮಣ್ಣಗೆ ಸಿಎಂ ತರಾಟೆ!

ವಿ. ಸೋಮಣ್ಣಗೆ ಸಿಎಂ ತರಾಟೆ!

ಬೆಂಗಳೂರು, ಆ. 28: ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು, ಸಚಿವ ವಿ. ಸೋಮಣ್ಣಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಕಚೇರಿಯಲ್ಲಿ ಫುಲ್ ತರಾಟೆ. ಎಲ್ಲರ ಎದುರೇ ತರಾಟೆ ತೆಗೆದುಕೊಂಡ ಬಿಎಸ್‌ವೈ. ಬೆಂಗಳೂರಿಗೆ ಬಂದಿದ್ದಕ್ಕೆ ತರಾಟೆ ತೆಗೆದುಕೊಂಡ ಸಿಎಂ. ಮೈಸೂರಿನಲ್ಲಿ ದಸರಾ ಹಬ್ಬದ ಆಚರಣೆಗೆ ತಯಾರಿ ನೋಡಿಕೊಳ‍್ಳದು ಬಿಟ್ಟು ನನ್ನ ಹಿಂದೆ ಯಾಕೆ  . ಬರ್ತೀರಿ, ನಿಮಗೆ ಕೊಟ್ಟ ಜವಾಬ್ದಾರಿ ‌ನಿಭಾಯಿಸಿ. ದಸರಾದ ಸಿದ್ಧತೆಗಳು ಏನೇನು ಆಗಿವೆ? ಮಾಡೋ ಕೆಲಸ ಬಿಟ್ಟು ಇಲ್ಯಾಕೆ ಸುತ್ತಾಡ್ತೀರಿ. ಮೊದ್ಲು ಆಗಬೇಕಾದ ಕೆಲಸ ನೋಡಿ. ಯಾವುದೇ ಸಮಸ್ಯೆ ಆಗದ ಹಾಗೆ ಎಲ್ಲವನ್ನೂ ಆಯೋಜನೆ ಮಾಡಬೇಕು.  ಏನಾದ್ರೂ ಸ್ವಲ್ಪ‌ ಹೆಚ್ಚುಕಡಿಮೆ ಆದ್ರೂ ಸಹಿಸಿಕೊಳ್ಳೋದಿಲ್ಲ. ಇದು ನಾಡಹಬ್ಬ, ಜೊತೆಗೆ ಇಡೀ‌ ರಾಜ್ಯಕ್ಕೆ ಒಳಿತಾಗಲಿ ಎಂದು ಪೂಜೆ ಮಾಡುವ ಹಬ್ಬ. ಅಲ್ಲಿ ಇಲ್ಲಿ ಸುತ್ತಾಡೋದು ಬಿಟ್ಟು ಅದನ್ನಷ್ಟೇ ನೋಡಿ ಎಂದು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣಗೆ ಸಿಎಂ ಸಿಡಿಮಿಡಿ ಮಾಡಿದರು. ಸಿಎಂ ಗರಂ ಆದ ಕೂಡಲೇ ಸರಿ ಎಂದು ಸಿಎಂ ಕಚೇರಿಯಿಂದ ಕಾಲ್ಕಿತ್ತ ವಿ. ಸೋಮಣ್ಣ. ವಿಕಾಸ ಸೌಧದ ತಮ್ಮ ಕಚೇರಿಗೆ ಹೋಗಿ ಕುಳಿತುಕೊಂಡರು

ಫ್ರೆಶ್ ನ್ಯೂಸ್

Latest Posts

Featured Videos