ಮೈಸೂರು, ಆ. 29 : ಚಾಮುಂಡಿ ದೇಗುಲದ ಒಳಗೆ ಬಿಡಲು ನಿರಾಕರಿಸಿ ಪೊಲೀಸರಿಗೆ ಸಿಎಂ ಯಡಿಯೂರಪ್ಪ ಅವರ ತಂಗಿ ಮಗ ರಾಜೇಶ್ ಧಮ್ಕಿ ಹಾಕಿದ್ದಾರೆ. ಕೆಆರ್ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಸಲ್ಲಿಸುವ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಮೈಸೂರು ಪ್ರವಾಸದಲ್ಲಿರುವ ಸಿಎಂ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಭದ್ರತೆಯ ಉದ್ದೇಶದಿಂದ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ದೇವಾಲಯದ ಒಳಗೆ ಬಿಡದಿದ್ದಕ್ಕೆ ರಾಜೇಶ್ ಹಾಗೂ ಬಿಜೆಪಿ ಕಾರ್ಯಕರ್ತ ಪೊಲೀಸರಿಗೆ ಅವಾಜ್ ಹಾಕಿದ್ದಾರೆ.
‘’ನೀನು ಇಲ್ಲಿಂದ ಬೇಗ ಹೋಗ್ತೀಯಾ. ನಿನ್ನ ಮೇಲೆ ದೂರು ಕೊಡುತ್ತೇನೆ ಎಂದು ಹೇಳಿ ದರ್ಪ ಮೆರೆದಿದ್ದಾರೆ.
ಕಾರ್ಯಕರ್ತರು ಕೂಗಿದ್ದಾರೆ. ನಾನು ಯಾರಿಗೂ ಧಮ್ಕಿ ಹಾಕಿಲ್ಲ. ನೀವು ಹೇಗಾದರೂ ಬಿಂಬಿಸಿ ನಾನು ಅವಾಜ್ ಹಾಕಿಲ್ಲ. ನಮ್ಮ ಜನಪರ ಕೆಲಸಗಳನ್ನು ನೀವು ತೋರಿಸಲ್ಲ. ಇಂತಹ ಚಿಕ್ಕಪುಟ್ಟ ವಿಚಾರವನ್ನು ಎತ್ತಿ ತೋರಿಸುತ್ತೀರ. ಒಳಗೆ ಬಿಡಲ್ಲ ಎಂದಿದಕ್ಕೆ ಕಾರ್ಯಕರ್ತರು, ಬೆಂಬಲಿಗರು ಆಕ್ರೋಶಗೊಂಡು ಕೂಗಾಡಿದ್ದಾರೆ. ನಾನು ಪೊಲೀಸರಿಗೆ ಬೆದರಿಕೆ ಹಾಕಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.