ಚಂಡೀಗಢ, ಜೂನ್. 7, ನ್ಯೂಸ್ ಎಕ್ಸ್ ಪ್ರೆಸ್ : ಲೋಕಸಭಾ ಚುನಾವಣೆ ವೇಳೆ ಪಂಜಾಬ್ ಸಿಎಂ ಅಮರೀಂದರ್‌ಸಿಂಗ್ ಮತ್ತು ಸಚಿವ ನವಜೋತ್‌ಸಿಂಗ್ ಸಿಧು ನಡುವೆ ಬಹಿರಂಗವಾಗಿಯೇ ನಡೆಸಿದ್ದ ವಾಕ್ಸಮರ ಇದೀಗ ಮತ್ತೊಂದು ಹಂತ ತಲುಪಿದೆ. ಲೋಕಸಭಾ ಚುನಾವಣೆಯಲ್ಲಿ ಕೆಲ ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲಿಗೆ ಸಚಿವ ಸಿಧು ಅವರು ಪೌರಾಡಳಿತ ಖಾತೆಯನ್ನು ಸೂಕ್ತವಾಗಿ ನಿರ್ವಹಿಸದೇ ಇದ್ದಿದ್ದೇ ಕಾರಣ ಎಂದು ಟೀಕಿಸಿರುವ ಸಿಎಂ ಅಮರೀಂದರ್, ಸಿಧುಗೆ ನೀಡಿದ್ದ ಪೌರಾಡಳಿತ ಖಾತೆಯನ್ನು ಹಿಂದಕ್ಕೆ ಪಡೆದು, ಅವರಿಗೆ ಇಂಧನ ಖಾತೆ ನೀಡಿದ್ದಾರೆ. ಈ ನಡುವೆ ಸಿಎಂ ಕ್ರಮದ ವಿರುದ್ಧ ಸಿಡಿದೆದ್ದಿರುವ ಸಿಧು, ಗುರುವಾರ ನಡೆದ ಸಚಿವ ಸಂಪುಟ ಸಭೆಗೆ ಗೈರಾಗುವ ಮೂಲಕ ಅಮರೀಂದರ್‌ಗೆ ಸಡ್ಡು ಹೊಡೆದಿದ್ದಾರೆ. ಅಲ್ಲದೆ ಸಂಪುಟ ಸಭೆಯ ವೇಳೆಯೇ ಪತ್ರಿಕಾಗೋಷ್ಠಿ ನಡೆಸಿದ ಸಿಧು, ತಮ್ಮ ಸಾಧನೆಯ ಬಗ್ಗೆ ವಿವರಣೆ ನೀಡಿದ್ದಾರೆ.