ನವದೆಹಲಿ, ಅ.1 : ಮಹಾರಾಷ್ಟ್ರ ಸಿಎಂ ಫಡ್ನವಿಸ್ ಗೆ ಮತ್ತೆ ಕಾನೂನು ಕಂಟಕ ಎದುರಾಗಿದೆ. ಬಾಂಬೆ ಹೈಕೋರ್ಟ್ ಆದೇಶವನ್ನು ಪಕ್ಕಕ್ಕೆ ತಳ್ಳಿದ ಸುಪ್ರೀಂಕೋರ್ಟ್, ಈ ಪ್ರಕರಣದಲ್ಲಿ ವಿಚಾರಣೆ ಎದುರಿಸುವಂತೆ ಬಿಜೆಪಿ ಹಿರಿಯ ನಾಯಕನಿಗೆ ಸೂಚನೆ ನೀಡಿದೆ. ಬಾಕಿ ಇರುವ ಎರಡು ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ನೀಡದಿರುವ ರಿಂದ ಚುನಾವಣೆ ಸಂದರ್ಭದಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಕಾನೂನು ತೊಡಕು ಉಂಟಾಗಿದೆ.