ಸಿಎಂ ಸದನದಲ್ಲಿ ಎಚ್‌ಡಿಕೆ ಗೆ ತಿರುಗೇಟು!

ಸಿಎಂ ಸದನದಲ್ಲಿ ಎಚ್‌ಡಿಕೆ ಗೆ ತಿರುಗೇಟು!

ಬೆಂಗಳೂರು: ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಮೇಲೆ ನಡೆದ ಚರ್ಚೆಗೆ ಸಿಎಂ ಉತ್ತರದ ವೇಳೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯಿತು. ರಾಜ್ಯದ ಪರವಾಗಿ ರಾಜ್ಯದ ಜನರ ಪರವಾಗಿ ನಿಲ್ಲುವುದನ್ನು ಬಿಟ್ಟು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಪರವಾಗಿತ್ತು ಬಯಸಿ ಕೇಂದ್ರಕ್ಕೆ ಪತ್ರ ಬರೆದಿರುವುದು ಸರಿಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಸದನದಲ್ಲಿ ಬಿಜೆಪಿ ಪರವಕಾಲತ್ತು ವಹಿಸಿದ್ದಾರೆ ರಾಜ್ಯದ ಪರವಾಗಿ ರಾಜ್ಯದ ಜನರ ಪರವಾಗಿ ತಾವು ವಕಾಲದ್ದು ವಹಿಸಿ ಕೇಂದ್ರಕ್ಕೆ ಪತ್ರ ಬರೆಯಿರಿ. ರಾಜ್ಯದ ಜನರ ಪರವಾಗಿ ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ ತಪ್ಪೇನು ಎಂದು ಪ್ರಶ್ನಿಸಿದರು.

ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರದ ಜೊತೆ ಸಂಘರ್ಷಕ್ಕೆ ಇಳಿಯ ಬಾರದು ಎಂದಿದ್ದಾರೆ ಆದರೆ ನಾವು ಸಂಘ ಶಕ್ಕೆ ಇಳಿದಿಲ್ಲ ರಾಜ್ಯದ ಪಾಲಿನ ಸಂವಿಧಾನಬದ್ಧ ಹಕ್ಕನ್ನು ಅನುದಾನವನ್ನು ಕೇಳುವುದು ಸಂಘರ್ಷ ಆಗುವುದಿಲ್ಲ.

ರಾಜ್ಯದಲ್ಲಿ ತೀವ್ರ ಬರಗಾಲ ಇದೆ ಕೇಂದ್ರದಲ್ಲಿ ಬರ ಪರಿಹಾರ ಕೇಳಿ 17 ಬಾರಿ ಕೇಂದ್ರಕ್ಕೆ ಬಾರದರೆ ಇದರಲ್ಲಿ ಒಂದು ಪತ್ರಕ್ಕೆ ಮಾತ್ರ ನಿಮ್ಮ ಪತ್ರ ತಲುಪಿದೆ ಎನ್ನುವ ಉತ್ತರ ಕೇಂದ್ರದಿಂದ ಬಂತು ಆದರೆ ಉಳಿದ 16 ಪತ್ರಗಳಿಗೆ ಉತ್ತರವೂ ಬರಲಿಲ್ಲ ಕೇಂದ್ರದ ಅನುದಾನ ರಾಜ್ಯಕ್ಕೆ ಇವತ್ತಿನವರೆಗೂ ಒಂದು ಪೈಸೆಯೂ ಬಂದಿಲ್ಲ.

ಇದು ನಿಯಮ ಬದ್ಧವಾಗಿ ರಾಜ್ಯದ ಹಕ್ಕು ರಾಜ್ಯದ ಪಾಲು ಇದನ್ನು ಕೇಂದ್ರ ಕೊಡುತ್ತಿಲ್ಲ ನಮ್ಮ ಪಾಲನ್ನು ರಾಜ್ಯದ ಪಾಲನ್ನು ಕೇಳುವುದು ತಪ್ಪ ಇದರಲ್ಲಿ ಸಂಘರ್ಷಿತ ಹೀಗಾಗುತ್ತದೆ ಎಂದು ಪ್ರಶ್ನಿಸಿದರು. ರಾಜ್ಯಕ್ಕೆ ಬರಗಾಲ ಬಂದಾಗ ಮಾನವ ಹಕ್ಕನ್ನು ನಿಯಮ ಬದ್ಧವಾಗಿ 100 ರಿಂದ 150 ದಿನಗಳಿಗೆ ಏರಿಕೆ ಮಾಡಬೇಕಿತ್ತು ಇದಕ್ಕಾಗಿ ಹಲವು ಬಾರಿ ಮನವಿ ಮಾಡಿದರು ಮಾನವ ದಿನವನ್ನು ಏರಿಕೆ ಮಾಡಿಲ್ಲ ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯವೇ ಎಂದು ಪ್ರಶ್ನಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos