ಬೆಳಗಾವಿ, ಅ. 16 : ಮನುಷ್ಯನಿಗಿಂತ ಪ್ರಾಣಿಗಳೇ ಸುಸಂಸ್ಕೃತವಾಗಿವೆ. ಕುಂದನ ನಗರಿಯಲ್ಲಿ ಪೊಲೀಸ್ ರ ನಾಯಿಯೊಂದು ತನ್ನ ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ, ಬಾಲವನ್ನು ಅಲ್ಲಾಡಿಸುತ್ತಾ ಸಿಎಂ ಬಿಎಸ್ವೈಗೆ ಗೌರವ ಸಲ್ಲಿಸಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಿಎಸ್ವೈ ಇಂದು ಸೊಲ್ಲಾಪುರ ಮತ್ತು ಲಾತೂರ್ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪೊಲೀಸ್ ಇಲಾಖೆಯ ಸೋನಿ ಹೆಸರಿನ ಶ್ವಾನದ ನಡುವೆ ಭಾವನಾತ್ಮಕ ಸನ್ನಿವೇಶವೊಂದು ಕುಂದಾನಗರಿ ಬೆಳಗಾವಿಯಲ್ಲಿ ಕಂಡುಬಂದಿದೆ. ಮಂಗಳವಾರ ರಾತ್ರಿ ಬೆಳಗಾವಿಯ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು.
ಮಹಾರಾಷ್ಟ್ರಕ್ಕೆ ತೆರಳುವ ಮುನ್ನ ಬೆಳಗಿನ ಜಾವದ ವಾಯುವಿಹಾರಕ್ಕೆ ತೆರಳಲು ಪ್ರವಾಸಿ ಮಂದಿರದಿಂದ ಸಿಎಂ ಬಿಎಸ್ವೈ ಹೊರಬಂದಾಗ ಮಂದಿರದ ಎದುರಲ್ಲೇ ಇದ್ದ ಪೊಲೀಸ್ ಶ್ವಾನ ಸೋನಿ ತನ್ನ ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ, ಬಾಲವನ್ನು ಅಲ್ಲಾಡಿಸುತ್ತಾ ಸಿಎಂ ಬಿಎಸ್ವೈಗೆ ಗೌರವ ಸಲ್ಲಿಸಿತು. ಮುಖ್ಯಮಂತ್ರಿ ಯಡಿಯೂರಪ್ಪ ನಮಸ್ಕರಿಸಿ ಅಲ್ಲಿಂದ ಹೊರಟರು. ವಿಡಿಯೋ ಸಖತ್ ವೈರಲ್ ಆಗಿದೆ.