ಬೆಂಗಳೂರು: ಹೊರವಲಯ ನೆಲಮಂಗಲ ತಾಲ್ಲೂಕಿನ
ಸರ್ಕಾರಿ ಅಧಿಕಾರಿಗಳೆಲ್ಲಾ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ .
ನೆಲಮಂಗಲ ತಾಲ್ಲೂಕಿನ ದಕ್ಷಿಣ ಕಾಶಿ ಪ್ರಸಿದ್ಧ ಖ್ಯಾತಿಯ ಶಿವಗಂಗೆ ಬೆಟ್ಟದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಸೇರಿದಂತೆ ಪ್ರಮುಖ 200 ಸರ್ಕಾರಿ ಅಧಿಕಾರಿಗಳು ಭಾಗಿಯಾಗಿ ಬೆಟ್ಟದ ಪ್ರದೇಶದಲ್ಲಿ ಸ್ವಚ್ಛತಾ ಕೆಲಸ ಮಾಡಿದರು. ಇನ್ನೂ ಈ ಎಲ್ಲಾ ಅಧಿಕಾರಿಗಳಿಗೆ ಕ್ಲೀನ್ ಮೌಂಟೇನ್ ಅಸೋಸಿಯೇಷನ್ ಕೂಡ ಸ್ವಚ್ಚತಾ ಕೆಲಸದಲ್ಲಿ ಸಾಥ್ ನೀಡಿದರು.