ಕ್ಲಾಸ್ ಮಿಸ್ ಮಾಡಿಲ್ಲ!

ಕ್ಲಾಸ್ ಮಿಸ್ ಮಾಡಿಲ್ಲ!

ಬೆಂಗಳೂರು,ಜ. 11 : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಸೇಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ನಲ್ಲಿ ಈಗ ಹೊಸ ಪ್ರಶಸ್ತಿ ನೀಡುವ ಸಂಪ್ರದಾಯ ಆರಂಭಿಸಲಾಗಿದೆ. 161 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರಶಸ್ತಿ ನೀಡಲಾಗುತ್ತಿದೆ. ವಿಷಯ ಏನಪ್ಪಾ ಅಂದರೆ ಈ ಶಾಲೆಯ ವಿದ್ಯಾರ್ಥಿಯೊಬ್ಬ 1 ರಿಂದ 12ನೇ ತರಗತಿವರೆಗೆ ಒಂದೇ ಒಂದು ಕ್ಲಾಸ್ ಮಿಸ್ ಮಾಡಿಕೊಂಡಿಲ್ಲ. ಶೇಕಡ 100ರಷ್ಟು ಹಾಜರಾತಿ ಗಳಿಸಿದ್ದಾನೆ. 18 ವರ್ಷದ ನಮನ್ ಬಿಪಿನ್ ಬಾಫ್ನಾ ಈ ಅಪರೂಪದ ಸಾಧನೆ ಮಾಡಿರುವ ವಿದ್ಯಾರ್ಥಿ.

ಶುಕ್ರವಾರ ಈತನಿಗೆ ಶಾಲೆಯ ವತಿಯಿಂದ ವಿಶೇಷ ಪುರಸ್ಕಾರ ನೀಡಲಾಯಿತು. ಇದೇ ಮೊದಲ ಬಾರಿಗೆ ವಿದ್ಯಾರ್ಥಿಯೊಬ್ಬ ಈ ರೀತಿಯ ಸಾಧನೆ ಮಾಡಿರುವುದು ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos