ನವದೆಹಲಿ, ಏ. 20, ನ್ಯೂಸ್ ಎಕ್ಸ್ ಪ್ರೆಸ್: ಇದು ಬಹುದೊಡ್ಡ ಪಿತೂರಿ” ಎಂದು ತಮ್ಮ ಮೇಲಿನ ಆರೋಪಕ್ಕೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಜೆಐ ರಂಜನ್ ಗೊಗೊಯ್ ವಿರುದ್ಧ ಅವರ ಮಾಜಿ ಕಿರಿಯ ಸಹಾಯಕಿಯೊಬ್ಬರು ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ಆನ್ ಲೈನ್ ಮಾಧ್ಯಮಗಳು ಮಾಡಿದ ವರದಿಗೆ ಸಂಬಂಧಿಸಿದಂತೆ ಗೊಗೊಯ್ ಪ್ರತಿಕ್ರಿಯೆ ನೀಡಿದರು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ “ಇದು ನ್ಯಾಯಾಂಗವನ್ನು ಅಸ್ಥಿರಗೊಳಿಸಲು ನಡೆದ ಬಹುದೊಡ್ಡ ಸಂಚು. ಆರೋಪ ಮಾಡಿದ ಮಹಿಳೆಯೊಂದಿಗೆ ಬಹುದೊಡ್ಡ ಕೈಗಳಿವೆ ಎನ್ನಿಸುತ್ತಿದೆ” ಎಂದು ಗೊಗೊಯ್ ಕಳವಳ ವ್ಯಕ್ತಪಡಿಸಿದ್ದಾರೆ. ಅಚ್ಚರಿ, ಆಕ್ಷೇಪಕ್ಕೆ ಕಾರಣವಾದ ಸುಪ್ರೀಂಕೋರ್ಟ್ ಕೊಲಿಜಿಯಂ ನಿರ್ಧಾರ “ನನಗೆ ಈ ಆರೋಪ ತೀವ್ರ ನೋವು ತಂದಿದೆ. ನಾಲ್ಕು ಮಾಧ್ಯಮಗಳು ಈ ಬಗ್ಗೆ ಸವಿವರ ಸುದ್ದಿ ಪ್ರಕಟಿಸಿವೆ. ನಾನು ಅವರಿಂದ ವಿವರಣೆ ಕೇಳುತ್ತೇನೆ” ಎಂದು ಸಹ ಅವರು ತಿಳಿಸಿದ್ದಾರೆ.