ಪೌರತ್ವ ಕಾಯ್ದೆ: ಪೊಲೀಸರಿಂದ ಲಘು ಲಾಠಿ ಚಾರ್ಜ್

ಪೌರತ್ವ ಕಾಯ್ದೆ: ಪೊಲೀಸರಿಂದ ಲಘು ಲಾಠಿ ಚಾರ್ಜ್

ಕೋಲಾರ, ಜ. 04: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಬೆಂಬಲಿಸಿ ಕೋಲಾರದಲ್ಲಿ ನಡೆಯುತ್ತಿರುವ ಮೆರವಣಿಗೆಯಲ್ಲಿ ಲಾಠಿ ಚಾರ್ಜ್ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಮೆರವಣಿಗೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ಮೆರವಣಿಗೆ ಮುಸ್ಲಿಂ ಸಮುದಾಯ ಹೆಚ್ಚಿರುವ ಕ್ಲಾಕ್ ಟವರ್ಗೆ ನುಗ್ಗಲು ಯತ್ನಿಸಿದಾಗ ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಲಾಠಿ ಪ್ರಹಾರ ನಡೆಸಲಾಗಿದೆ. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ಕ್ಲಾಕ್ ಟವರ್ಗೆ ನುಗ್ಗಲು ಪ್ರಯತ್ನಿಸಲಾಗಿದೆ. ಇದೇ ಕಾರಣಕ್ಕೆ ಪೊಲೀಸರು, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.

ಇಂದು ನಗರದಲ್ಲಿ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳಿಂದ ಪೌರತ್ವ ಕಾಯ್ದೆ ಬೆಂಬಲಿಸಿದ ಮೆರವಣಿಗೆ ಯನ್ನು ಏರ್ಪಡಿಸಲಾಗಿತ್ತು. ಇಂತಹ ಮೆರವಣಿಗೆಯಲ್ಲಿ ಜಿಲ್ಲೆಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದು, ಮೆರವಣಿಗೆಕಾರರಿಗೆ ನಿಗಧಿ ಪಡಿಸಿದ ಮಾರ್ಗದಲ್ಲಿಯೇ ಸಾಗುವಂತೆ ಜಿಲ್ಲಾ ಪೊಲೀಸರು ಸೂಚನೆ ನೀಡಿದ್ದರು. ಆದ್ರೇ ಜಿಲ್ಲಾ ಆಸ್ಪತ್ರೆ ಎದುರು ಬರುತ್ತಿದ್ದಂತೆ ಮೆರವಣಿಗೆಕಾರರು ಮಾರ್ಗ ಬದಲಿಸಿದ್ದರು.

ಈ ಹಿನ್ನಲೆಯಲ್ಲಿ ಪೌರತ್ವ ಕಾಯ್ದೆ ಬೆಂಬಲಿತ ಮೆರವಣಿಗೆ ನಡೆಸುತ್ತಿದ್ದವರು ಹಾಗೂ ಪೊಲೀಸರ ಮಧ್ಯೆ ವಾಗ್ವಾದವೇ ನಡೆಯಿತು. ಕೆಲ ಹೊತ್ತು ಬಿಗುವಿನ ವಾತಾವಾರಣ ಕೂಡ ಸೃಷ್ಠಿಯಾಗಿತ್ತು. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಸೂಚಿಸಿದ ಮಾರ್ಗದಲ್ಲಿಯೇ ಸಾಗುವಂತೆ ಮೆರವಣಿಗೆಕಾರರು ತೆರಳುವಂತೆ ಮಾಡುವ ಹಿನ್ನಲೆಯಲ್ಲಿ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos